Site icon PowerTV

ಸೌಹಾರ್ದತೆ ಸಂದೇಶ ಸಾರಿದ ಸಮೃದ್ಧಿ ಮಂಜುನಾಥ್

ಬೆಂಗಳೂರು : ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರು ರಂಜಾನ್ ಹಬ್ಬದ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಸೌಹಾರ್ದತೆಯ ಸಂದೇಶ ಸಾರಿದ್ದಾರೆ.

ಕೋಲಾರ ಜಿಲ್ಲೆ ಹಾಗೂ ಮುಳಬಾಗಿಲು ಈದ್ಗಾ ಮೈದಾನ, ಮಸೀದಿಯಲ್ಲಿ ಸಾವಿರಾರು ಮುಸ್ಲಿ ಸಮುದಾಯದವರಿಂದ ಇಂದು ಪವಿತ್ರ ರಂಜಾನ್ ಹಬ್ಬ ಆಚರಿಸಲಾಯಿತು. ಈ ವೇಳೆ ಮುಳಬಾಗಿಲು ಈದ್ಗಾ ಮೈದಾನದಲ್ಲಿ ಮುಸ್ಲಮಾನ್ ಬಂಧುಗಳೊಂದಿಗೆ ಸಮೃದ್ಧಿ ಮಂಜುನಾಥ್ ಪ್ರಾರ್ಥನೆಯಲ್ಲಿ ಪಾಲ್ಗೊಂಡು, ರಂಜಾನ್ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.

ನಿಮ್ಮೆಲ್ಲಾ ಕಷ್ಟಗಳನ್ನು ಪರಿಹರಿಸಲಿ

ರಂಜಾನ್ ಹಬ್ಬದ ಹಿನ್ನೆಲೆ ಸಮೃದ್ಧಿ ಮಂಜುನಾಥ್ ಅವರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ. ಕರುಣಾಮಯಿ ಅಲ್ಲಾಹ್ ನಿಮ್ಮನ್ನು ಆಶೀರ್ವದಿಸಲಿ, ನಿಮ್ಮೆಲ್ಲಾ ಕಷ್ಟಗಳನ್ನು ಪರಿಹರಿಸಲಿ, ಸದಾ ಸುಖಮಯ ಜೀವನ ನಿಮ್ಮದಾಗಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ರಂಜಾನ್ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ತಾಯಿಯ ಋಣ ಜನುಮ-ಜನುಮದಲ್ಲೂ ತೀರಿಸಲಾಗದು : ಸಮೃದ್ಧಿ ಮಂಜುನಾಥ್

ಒಂದು ಅವಕಾಶ ಕೊಟ್ಟು ಆಶೀರ್ವದಿಸಿ

ನಾನು ನಂಬಿರುವುದು ಮತದಾರ ಪ್ರಭುಗಳನ್ನು, ಬೇರೆಯವರ ಬಗ್ಗೆ ಯೋಚಿಸುವ ಸಮಯವಿಲ್ಲ. ನನ್ನ ಕೆಲಸ ಮತದಾರರ ಬಳಿ ತೆರಲಿ ಒಂದು ಅವಕಾಶ ಕೊಟ್ಟು ಆಶೀರ್ವಾದ ಮಾಡುವಂತೆ ಪ್ರಾರ್ಥಿಸುತ್ತೇನೆ ಎಂದು ಸಮೃದ್ಧಿ ಮಂಜುನಾಥ್ ಹೇಳಿದ್ದಾರೆ.

Exit mobile version