Site icon PowerTV

ಹಿರೇಕೆರೂರಲ್ಲಿ ‘ಕೌರವ ಪಾಟೀಲ್’ ಭರ್ಜರಿ ಮತ ‘ಶಿಕಾರಿ’

ಹಾವೇರಿ : ಕೃಷಿ ಸಚಿವ ಹಾಗೂ ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್ ಅವರು ಕ್ಷೇತ್ದಾದ್ಯಂತ ಭರ್ಜರಿ ಮತ ಬೇಟೆ ಆರಂಭಿಸಿದ್ದು, ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.

ಇಂದು ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಇಂದು ಬೆಳ್ಳಂಬೆಳಗ್ಗೆ ಮತ ಪ್ರಚಾರ ಆರಂಭಿಸಿದರು. ಡಮ್ಮಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ವಿಧಾನಸಭಾ ಚುನಾವಣೆಯ ನಿಮಿತ್ತ ಪ್ರಚಾರ ಕೈಗೊಂಡು, ಮತಯಾಚನೆ ಮಾಡಿದರು.

ಬಳಿಕ, ಹಿರೇಕೆರೂರು ಮತಕ್ಷೇತ್ರದ ಶೀತಿಕೊಂಡ, ಜಾವಳ್ಳಿ ಮತ್ತು ಎಮ್ಮಿಗನೂರು ಗ್ರಾಮಗಳಿಗೆ ತಮ್ಮ ಪುತ್ರಿಯೊಂದಿಗೆ ಭೇಟಿ ನೀಡಿ, ಅಬ್ಬರದ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಗ್ರಾಮದ ಜನರು ಪಾಲ್ಗೊಂಡಿದ್ದರು.

ಇದನ್ನೂ ಓದಿ : ಪತ್ನಿ ವನಜಾ ಹುಟ್ಟುಹಬ್ಬ ಆಚರಿಸಿದ ಬಿ.ಸಿ ಪಾಟೀಲ್

ಹಿರೇಕೆರೂರು ಕ್ಷೇತ್ರ ವ್ಯಾಪ್ತಿಯ ನಾಗವಂದ ಮತ್ತು ಅಣಜಿ ಗ್ರಾಮಗಳಿಗೆ ಸಚಿವ ಬಿ.ಸಿ ಪಾಟೀಲ್ ಭೇಟಿ ನೀಡಿ ಮತಯಾಚನೆ ಮಾಡಿದರು.

ಹಿರೇಕೆರೂರು ಕ್ಷೇತ್ರ ವ್ಯಾಪ್ತಿಯ ಆಪಿನಕೊಪ್ಪ ಮತ್ತು ಹೊಸಕಟ್ಟಿ ಗ್ರಾಮಗಳಿಗೆ ಸಚಿವ ಬಿ.ಸಿ ಪಾಟೀಲ್ ಭೇಟಿ ನೀಡಿ ಪ್ರಚಾರ ನಡೆಸಿದರು.

ಹಿರೇಕೆರೂರು ಕ್ಷೇತ್ರ ವ್ಯಾಪ್ತಿಯ ಕಚವಿ, ನಿಟ್ಟೂರು, ವೀರಾಪುರ ಮತ್ತು ಚಿಕ್ಕೊಣ್ತಿ ಗ್ರಾಮಗಳಿಗೆ ಸಚಿವ ಬಿ.ಸಿ ಪಾಟೀಲ್ ಅವರು ಪುತ್ರಿಯೊಂದಿಗೆ ಭೇಟಿ ನೀಡಿ, ಪ್ರಚಾರ ಕೈಗೊಂಡು ಮತಯಾಚನೆ ಮಾಡಿದರು.

Exit mobile version