Site icon PowerTV

ಅಮಿತ್ ಶಾಗೆ ತಂದಿದ್ದ 250 ಕೆಜಿ ಸೇಬಿನ ಹಾರ ಕ್ಷಣದಲ್ಲೇ ಚಿಂದಿ

ಬೆಂಗಳೂರು : ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಪ್ರಚಾರ ಕಾರ್ಯಗಳನ್ನು ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದಾರೆ. ಆದರೆ ನಿಗದಿಪಡಿಸಲಾಗಿದ್ದ ಅಮಿತ್​ ಶಾ ರೋಡ್ ಶೋವನ್ನು ಮಳೆಯ ಹಿನ್ನೆಲೆ ರದ್ದುಗೊಳಿಸಲಾಗಿದೆ.

ಇದನ್ನೂ ಓದಿ : ಇಂದು ರಾಜ್ಯಕ್ಕೆ ಅಮಿತ್‌ ಶಾ ಎಂಟ್ರಿ 

ಹೌದು, ಮತ್ತೊಮ್ಮೆ ಗದ್ದುಗೆ ಏರಲು ಅಮಿತ್​ ಶಾ ಬೆಂಗಳೂರಿಗೆ ಆಗಮಿಸಿದ್ದು,ಎಲೆಕ್ಷನ್​ನಲ್ಲಿ ವೇಳೆಯಲ್ಲಿ ವಿಜಯಶಾಲಿಯಾಗಲು ಏನೆಲ್ಲಾ ಮಾಡಬೇಕು ಎಂಬುವುದರ ಕುರಿತು ಬಿಜೆಪಿ ನಾಯಕರ ಜೊತೆ ಸಭೆ ಹಮ್ಮಿಕೊಂಡಿದ್ದರು. ಇದರ ಜೊತೆಗೆ ರೋಡ್ ಶೋ ಕೂಡ ಇತ್ತು. ಅಂದ್ರೆ ಮಳಿಯಿಂದ ಎಲ್ಲಾ ಕಾರ್ಯಕ್ರಮಗಳು  ಸ್ಥಗಿತವಾಗಿದ್ದೇವೆ.

ಇನ್ನೂ ಅಮಿತ್ ಶಾ ರೋಡ್ ಶೋ ರದ್ದಾಗುತ್ತಿದ್ದಂತೆಯೇ ಅವರಿಗಾಗಿ ತರಿಸಲಾಗಿದ್ದ 250 ಕೆಜಿ ತೂಕದ ಸೇಬಿನ ಹಾರವನ್ನು ಜನರು ಚಿಂದಿ ಚಿಂದಿ ಮಾಡಿದ್ದಾರೆ. ಹಾರಕ್ಕೆ ಕೈ ಹಾಕಿ ಸೇಬುಗಳನ್ನು ಜನರು ಕಿತ್ತುಕೊಂಡು ಹೋಗಿದ್ದು, ಕ್ಷಣಾರ್ಧದಲ್ಲೇ ಹಾರದಲ್ಲಿದ್ದ ಸೇಬುಗಳೆಲ್ಲವೂ ಖಾಲಿಯಾಗಿ ಹೋಗಿದೆ.

 

Exit mobile version