Site icon PowerTV

Akshaya Tritiya 2023 : ಅಕ್ಷಯ ತೃತೀಯ ಯಾಕೆ ಆಚರಣೆ ಮಾಡಬೇಕು ನಿಮಗೆ ಗೊತ್ತಾ…?

ನಾವು ಯಾಕೆ ಅಕ್ಷಯ ತೃತೀಯವನ್ನು ಆಚರಣೆ ಮಾಡಬೇಕು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿಂದೆ ನೋಡಿ..

ಹೌದು, ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ನಾವು ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ವರ್ಷ ಅಕ್ಷಯ ತೃತೀಯವನ್ನು ಏಪ್ರಿಲ್‌ 22 ರಂದು ಆಚರಿಸಲಾಗುತ್ತದೆ. ಈ ದಿನದಂದು ಲಕ್ಷ್ಮಿ ಮತ್ತು ಕುಬೇರ ದೇವರನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ, ಸಂಪತ್ತು-ಅದೃಷ್ಟ ನೆಲೆಸುತ್ತದೆ ಎನ್ನುವ ನಂಬಿಕೆಯಿದೆ.

ಅಕ್ಷಯ ತೃತೀಯ ಇತಿಹಾಸ ಮತ್ತು ಮಹತ್ವ

ಪುರಾಣ ಮತ್ತು ಪ್ರಾಚೀನ ಇತಿಹಾಸದ ಪ್ರಕಾರ, ಈ ಅಕ್ಷಯ ತೃತೀಯ ದಿನದಂದು ಬಹಳಷ್ಟು ಘಟನೆಗಳು ನಡೆದಿವೆ. ಈ ದಿನದ ಇತಿಹಾಸವನ್ನು ಹೇಳುವುದಾದರೆ, ಒಂದು ದಂತಕಥೆಯ ಪ್ರಕಾರ, ಅಕ್ಷಯ ತೃತೀಯ ದಿನದಂದು ನಾಲ್ಕು ಯುಗಗಳಲ್ಲಿ ಎರಡನೇ ಯುಗವಾದ ತ್ರೇತಾಯುಗವು ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನು ಅಕ್ಷಯ ತೃತೀಯ ದಿನದಂದು ಜನಿಸಿದರು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಅಕ್ಷಯ ತೃತೀಯ ಯಾವಾಗ, ಹೇಗೆ ಆಚರಿಸಬೇಕು? : ಇಲ್ಲಿದೆ ನೋಡಿ ಮಾಹಿತಿ

ಈ ದಿನ ಮಹರ್ಷಿ ವೇದವ್ಯಾಸರು ಗಣೇಶನಿಗೆ ಮಹಾಕಾವ್ಯ ಮಹಾಭಾರತವನ್ನು ನಿರೂಪಿಸಲು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. ಈ ದಿನ, ಶ್ರೀ ಕೃಷ್ಣನು ತನ್ನ ಸಹಾಯಕ್ಕಾಗಿ ಬಂದ ತನ್ನ ಬಡ ಸ್ನೇಹಿತ ಸುಧಾಮನಿಗೆ ಸಂಪತ್ತು ಮತ್ತು ಹಣದ ಲಾಭವನ್ನು ದಯಪಾಲಿಸಿದ ದಿನವಾಗಿದೆ. ಮಹಾಭಾರತದ ಪ್ರಕಾರ, ಈ ದಿನದಂದು ಶ್ರೀ ಕೃಷ್ಣನು ಪಾಂಡವರಿಗೆ ವನವಾಸದಲ್ಲಿದ್ದಾಗ ಅವರಿಗೆ ಅಕ್ಷಯ ಪಾತ್ರೆಯನ್ನು ಅರ್ಪಿಸಿದನು ಎಂದು ಹೇಳಲಾಗುತ್ತದೆ.

 

 

Exit mobile version