Site icon PowerTV

ಕೆ.ಎಸ್​​.ಈಶ್ವರಪ್ಪಗೆ ಪ್ರಧಾನಿ ಫೋನ್​​ ಕಾಲ್​​ ; ಈಶ್ವರಪ್ಪಗೆ ಒಲಿಯುತ್ತಾ ಉನ್ನತ ಹುದ್ದೆ..?

ಶಿವಮೊಗ್ಗ: ಮಾಜಿ ಸಚಿವ ಕೆಎಸ್​ ಈಶ್ವರಪ್ಪ(KS Eshwarappa) ಅವರು ರಾಜ್ಯ ವಿಧಾನಸಭಾ ಚುನಾವಣೆಗೆ  ರಾಜಕೀಯಕ್ಕೆ ಸ್ವಯಂ ನಿವೃತ್ತಿ ಘೋಷಣೆ (Electoral Politics Retirement )ಮಾಡಿದ್ದು, ಇದೀಗ ಸ್ವಂತಹ ಪ್ರಧಾನಿ ನರೇಂದ್ರ ಮೋದಿ( Narendra Modi) ಅವರೇ ಕಾಲ್ ಮಾಡಿ ಶ್ಲಾಘಿಸಿದ್ದಾರೆ.

ಹೌದು,ಇಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಅವರ ರಾಜಕೀಯ ಪ್ರಬುದ್ಧ ನಡೆಯನ್ನು ಪ್ರಶಂಶಿಸಿದ್ದು, ಅಲ್ಲದೇ ಪಕ್ಷ ಸದಾ ನಿಮ್ಮ ಜೊತೆ ಇದೆ ಎಂದು ಭರವಸೆ ನೀಡಿದರು. ಇದರಿಂದ ಕೆಎಸ್ ಈಶ್ವರಪ್ಪ ಫುಲ್ ಖುಷ್ ಆಗಿದ್ದಾರೆ.

ಹಾಗಾದ್ರೆ, ಈಶ್ವರಪ್ಪನವರು ಮುಂದೆ ಸೂಕ್ತ ಸ್ಥಾನಮಾನ ಸಿಗಲಿದ್ಯಾ ಎನ್ನುವ ಚರ್ಚೆಗಳು ಇದೀಗ ಆರಂಭವಾಗಿವೆ.

Exit mobile version