Site icon PowerTV

Old woman’s ordeal : ವೃದ್ಧಾಪ್ಯ ವೇತನಕ್ಕಾಗಿ ವೃದ್ಧೆಯ ಹರಸಾಹಸ

ಇಲ್ಲೋಬ್ಬ ವೃದ್ಧೆ ಪಿಂಚಣಿ ಪಡಿಯುವುದಕ್ಕಾಗಿ ಕಿಲೋಮೀಟರ್​ಗಟ್ಟಲೆ ಬರಿಗಾಲಿನಲ್ಲಿಯೇ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.

ಹೌದು, ವೃದ್ಧೆಗೆ 70 ವರ್ಷವಿದ್ದು, ಈಕೆ ನಡೆಯಲಾಗದ ಪರಿಸ್ಥಿತಿ ಇದ್ದರು ಕೂಡ ಬ್ಯಾಂಕ್​ಗೆ ಹೋಗಲು  ಮುರಿದಿರುವ ಖುರ್ಚಿಯ ಸಹಾಯ ಪಡೆಯುತ್ತಾ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ  ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಂಚಣಿ ಪಡೆಯುವುದು ಆಕೆಗೆ ಅನಿವಾರ್ಯವಾಗಿದೆ.

ಪಿಂಚಣಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದ ವೃದ್ಧೆ

ಈ ಬದುಕಿಗಾಗಿ ನಾವು ಏನೆಲ್ಲಾ ಕಷ್ಟಪಡುತ್ತೇವೆ, ಜೀವನ ಸಾಗಿಸುವುದಕ್ಕಾಗಿ ತಿಂಗಳಿಗೆ ಬರುವ ಪಿಂಚಣಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ವೃದ್ಧೆ ಹೆಸರು ಸೂರ್ಯ ಹರಿಜನ್, ಅವರು ವಲಸೆ ಕಾರ್ಮಿಕರಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಇಷ್ಟು ವರ್ಷ ಕೆಲಸ ಮಾಡುತ್ತಿದ್ದರು. ಅವರು ತನ್ನ ಕಿರಿ ಮಗನ ಜತೆ ವಾಸವಾಗಿದ್ದಾರೆ, ಅವರು ಸ್ವಂತ ಜಮೀನು, ಮನೆ ಯಾವುದೂ ಇಲ್ಲ, ಗುಡಿಸಿಲಿನಲ್ಲಿಯೇ ಅವರ ವಾಸ.

 

 

 

 

Exit mobile version