Site icon PowerTV

ಶಿಡ್ಲಘಟ್ಟದಲ್ಲಿ ಕೇಸರಿ ಕಹಳೆ : ಸೀಕಲ್ ರಾಮಚಂದ್ರಗೌಡ ನಾಮಪತ್ರ ಸಲ್ಲಿಕೆ

ಬೆಂಗಳೂರು : ಶಿಡ್ಲಘಟ್ಟ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ​ ಅವರು ಸಾವಿರಾರು ಕಾರ್ಯಕರ್ತರ ಬೆಂಬಲದೊಂದಿಗೆ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಅಕ್ಷರಶಃ ಇತಿಹಾಸವೇ ಸೃಷ್ಟಿ ಆಗಿದೆ. ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೆ ಅಪಾರ ಸಂಖ್ಯೆ ಬೆಂಬಲಿಗರು ಬಲ ನೀಡಿ, ಬಿಜೆಪಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಸೇವಾಸೌಧದಿಂದ ಅಪಾರ ಬೆಂಬಲಿಗರು ಮತ್ತು ಕಾರ‍್ಯಕರ್ತರ ಜೊತೆ ಬೃಹತ್ ರ‍್ಯಾಲಿಯ ಮುಖಾಂತರ ಕೋಟೆ ವೃತ್ತ ಮಾರ್ಗವಾಗಿ ಹೊರಟು ಚಿಕ್ಕಬಳ್ಳಾಪುರ ತಾಲೂಕು ಕಚೇರಿಗೆ ತಲುಪಿದರು. ತಹಶೀಲ್ದಾರ್‌ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.

ಇದನ್ನೂ ಓದಿ : ಶಿಡ್ಲಘಟ್ಟದಲ್ಲಿ ಬದಲಾವಣೆ ಪರ್ವ : ‘ಕೈ, ದಳ’ ಬಿಟ್ಟು ಬಿಜೆಪಿ ಸೇರಿದ ನೂರಾರು ಮುಖಂಡರು

ರಾಜ್ಯ ನಾಯಕರ ಸಾಥ್

ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ನಾಯಕರುಗಳಾದ ಪಿ.ಸಿ ಮೋಹನ್, ಸಂಸದರಾದ ಮುನಿಸ್ವಾಮಿ, ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಎಂಟಿಬಿ ನಾಗರಾಜ್, ಮಾಜಿ ಶಾಸಕ ರಾಜಣ್ಣ ಹಾಗೂ ಮತ್ತಿತರ ನಾಯಕರು ಸಾಥ್ ನೀಡಿದ್ದಾರೆ.

ಗೆದ್ದರು, ಸೋತರೂ ಇದೇ ನನ್ನ ಕರ್ಮಭೂಮಿ

ಈ ವೇಳೆ ಮಾತನಾಡಿರುವ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರ​ ಅವರು, ಸೀಕಲ್ ನನ್ನ ಜನ್ಮಭೂಮಿ, ಶಿಡ್ಲಘಟ್ಟ ಕರ್ಮಭೂಮಿ. ಗೆದ್ದರು, ಸೋತರೂ ಇದೇ ನನ್ನ ಕರ್ಮಭೂಮಿ. ಶಿಡ್ಲಘಟ್ಟದಲ್ಲಿ ಬಿಜೆಪಿ ಈ ಬಾರಿ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ನಾಮಪತ್ರ ಸಲ್ಲಿಕೆಗೆ ಬಂದು ಹಾರೈಸಿದ ನನ್ನ ಶಿಡ್ಲಘಟ್ಟ ಕ್ಷೇತ್ರದ ಜನರ ಪ್ರೀತಿ, ಬೆಂಬಲಕ್ಕೆ ನಾನು ಋಣಿಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

Exit mobile version