Site icon PowerTV

Watermelon In Summer : ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದು ಎಷ್ಟು ಉತ್ತಮ ಗೊತ್ತಾ..?

ಬೇಸಿಗೆಯಲ್ಲಿ ನಾವು ಕಲ್ಲಂಗಡಿ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಹೌದು, ಈ ಸೀಸನ್​ನಲ್ಲಿ ದೇಹಕ್ಕೆ ನೀರು ಬಹಳ ಮುಖ್ಯ.ನಾವು ಹೆಚ್ಚಾಗಿ ನೀರು ಕುಡಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಜೊತೆ ಚರ್ಮಕ್ಕೆ ಹೊಳಪು ಸಹ ಬರುತ್ತದೆ. ಬೇಸಿಗೆ ಕಾಲದಲ್ಲಂತೂ ಎಷ್ಟು ನೀರು ಕುಡಿದರು ಸಹ ಪದೇ ಪದೇ ದೇಹ ಡ್ರೈ ಆಗುತ್ತದೆ. ಅದುವಲ್ಲದೇ ಬಿಸಿಲು ಹೆಚ್ಚಾದಂತೆ ಐಸ್​ ಕ್ರೀಂ ಮತ್ತು (ಕೂಲ್​ ಡ್ರಿಂಕ್ಸ್​​) ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ಇದಕ್ಕೆ ಪರ್ಯಾಯವಾಗಿ ಅತೀ ಹೆಚ್ಚು ನೀರಿನಾಂಶವಿರುವ ಹಣ್ಣುಗಳನ್ನು ಸೇವನೆ ಮಾಡುವುದು ಉತ್ತಮ. ಅದರಲ್ಲೂ ಕಲ್ಲಂಗಡಿ ಮುಖ್ಯವಾದುದು.

ಕಲ್ಲಂಗಡಿ ಸೇವನೆಯಿಂದ ಸಿಗುವ ಲಾಭಗಳು

ನಮ್ಮ ದೇಹವನ್ನು ತಂಪಾಗಿಡಲು ಸಹಾಯಕವಾಗುತ್ತದೆ. ಇನ್ನು ಈ ಹಣ್ಣಿನಲ್ಲಿ ವಿಟಮಿನ್​ ಸಿ ಅಧಿಕವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ನಮ್ಮ ಚರ್ಮಕ್ಕೂ ಉತ್ತಮ. ದಿನ ನಿತ್ಯ ಒಂದು ಪೀಸ್​ ಕಲ್ಲಂಗಡಿ ತಿಂದರೂ ಸಾಕು ನಮ್ಮ ದೇಹವನ್ನೂ Hydrate (ನೀರಿನಾಂಶ) ಆಗಿ ಇರಿಸುತ್ತದೆ. ಒಟ್ಟಿನಲ್ಲಿ ಬೇಸಿಗೆ ಕಾಲದಲ್ಲಿ ಮನಸ್ಸು ಮತ್ತು ದೇಹ ಎರಡನ್ನೂ ತಂಪಾಗಿರಿಸುತ್ತದೆ.

Exit mobile version