Site icon PowerTV

ಸಮೃದ್ದಿ ಮಂಜುನಾಥ್ ಶಕ್ತಿ ಪ್ರದರ್ಶನ : ಎರಡನೇ ಬಾರಿ ನಾಮಪತ್ರ ಸಲ್ಲಿಕೆ

ಬೆಂಗಳೂರು : ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್​ ಅವರು ಸಾವಿರಾರು ಕಾರ್ಯಕರ್ತರ ಬೆಂಬಲದೊಂದಿಗೆ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಕೋಲಾರ ಜಿಲ್ಲೆ ಮುಳಬಾಗಿಲು ಕ್ಷೇತ್ರದಲ್ಲಿ ಇತಿಹಾಸವೇ ಸೃಷ್ಟಿ ಆಗಿದೆ. ಇದೇ ಮೊದಲ ಬಾರಿಗೆ ಜೆಡಿಎಸ್ ಅಭ್ಯರ್ಥಿಗೆ ಅಪಾರ ಸಂಖ್ಯೆ ಬೆಂಬಲಿಗರು ಬಲ ನೀಡಿ, ಶಕ್ತಿ ಪ್ರದರ್ಶನ ಮಾಡಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ದಿವಂಗತ ಆಲಂಗೂರು ಸೀನಣ್ಣನವರ ಪ್ರತಿಮೆಗೆ ಸಮೃದ್ದಿ ಮಂಜುನಾಥ್​ ಮಾಲಾರ್ಪಣೆ ಮಾಡಿದ್ದಾರೆ. ಬಳಿಕ, ಅಂಬೇಡ್ಕರ್ ಸರ್ಕಲಿನಿಂದ ಜೆಡಿಎಸ್ ಪಕ್ಷದ ಮುಖಂಡರು, ಅಸಂಖ್ಯಾತ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಮೆರವಣಿಗೆ ಮೂಲಕ ತಾಲ್ಲೂಕು ಮುಖಂಡರ ಸಮುಖದಲ್ಲಿ ಪಕ್ಷದ ಬಿ.ಫಾರಂನೊಂದಿಗೆ ನಾಮಪತ್ರವನ್ನು ಸಲ್ಲಿದ್ದಾರೆ.

ಇದನ್ನೂ ಓದಿ : ಇಂದು ಜೆಡಿಎಸ್‌ ಅಂತಿಮ‌ಪಟ್ಟಿ ಬಿಡುಗಡೆ ಸಾಧ್ಯತೆ

ದೇವೇಗೌಡರ ಆಶೀರ್ವಾದ

ನಾಮಪತ್ರ ಸಲ್ಲಿಕೆ ಹಿನ್ನೆಲೆ ಸಮೃದ್ದಿ ಮಂಜುನಾಥ್​ ಅವರು ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ ಅವರಿಂದ ಬಿ ಫಾರಂ ಪಡೆದು, ದೇವೇಗೌಡರ ಆಶೀರ್ವಾದ ಪಡೆದಿದ್ದರು.

ಎರಡನೇ ಬಾರಿ ನಾಮಪತ್ರ ಸಲ್ಲಿಕೆ

ಈಗಾಗಲೇ ಸಾಂಕೇತಿಕವಾಗಿ ಸಮೃದ್ದಿ ಮಂಜುನಾಥ್​ ಅವರು ನಾಮಪತ್ರ ಸಲ್ಲಿಸಿದ್ದರು. ಇದೀಗ ಪಕ್ಷದ ಬಿ ಫಾರಂ ನೊಂದಿಗೆ ಎರಡನೇ ಬಾರಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇನ್ನೂ ನಾಮಪತ್ರ ಸಲ್ಲಿಕೆ ವೇಳೆ  ಆಗಮಿಸಿ ಹಾರೈಸಿದ ಎಲ್ಲರರಿಗೂ ಸಮೃದ್ಧಿ ಮಂಜುನಾಥ್ ಧನ್ಯವಾದ ತಿಳಿಸಿದ್ದಾರೆ.

Exit mobile version