Site icon PowerTV

ಕಾಂಗ್ರೆಸ್ 5ನೇ ಪಟ್ಟಿ ಬಿಡುಗಡೆ : ಶಿಗ್ಗಾವಿ ಅಭ್ಯರ್ಥಿ ಬದಲಾವಣೆ

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿದ್ದು, ಇನ್ನೂ ಐದು ಕ್ಷೇತ್ರಗಳು ಕಾಂಗ್ರೆಸ್ ಪಕ್ಷಗೆ ಕಗ್ಗಂಟಾಗಿಯೇ ಉಳಿದಿದೆ.

ಈಗಾಗಲೇ ನಾಲ್ಕು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಇದೀಗ 5ನೇ ಪಟ್ಟಿಯಲ್ಲಿ ತನ್ನ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ. ಶಿಗ್ಗಾವಿಗೆ ಯಾಸಿರ್​ ಅಹಮ್ಮದ್​ ಪಠಾಣ್​​ಗೆ ಟಿಕೆಟ್​ ನೀಡಲಾಗಿದೆ. ಸವಣೂರಿಗೆ ಟಿಕೆಟ್​ ಘೋಷಿಸಿದ್ದ ಕಾಂಗ್ರೆಸ್, ಇದೀಗ ಹಿಂಪಡೆದಿದೆ.

ಇದನ್ನೂ ಓದಿ : ಜೆಡಿಎಸ್ 3ನೇ ಪಟ್ಟಿ ರಿಲೀಸ್: ಇವರೇ ಟಿಕೆಟ್ ಗಿಟ್ಟಿಸಿಕೊಂಡ 59 ಅಭ್ಯರ್ಥಿಗಳು

ಪುಲಿಕೇಶಿನಗರ ಟಿಕೆಟ್‌ ಅನ್ನು ಮುನಿಯಪ್ಪ ಆಪ್ತ ಎ.ಸಿ. ಶ್ರೀನಿವಾಸ್‌ ಅವರಿಗೆ ಘೋಷಣೆ ಮಾಡಲಾಗಿದೆ. ಅಖಂಡ ಶ್ರೀನಿವಾಸ್ ಅವರಿಗೆ ಟಿಕೆಟ್ ಕೈತಪ್ಪಿದೆ. ಇನ್ನೂ ಒಟ್ಟು ಐದು ಕ್ಷೇತ್ರಗಳ ಟಿಕೆಟ್‌ ಅನ್ನು ಘೋಷಣೆ ಮಾಡಬೇಕಿದೆ.

ಇನ್ನು ಐದು ಕ್ಷೇತ್ರಗಳು ಕಗ್ಗಂಟು

ಐದು ಪಟ್ಟಿ ಬಿಡುಗಡೆ ಮಾಡಿರುವ ಕೈ ಹೈಕಮಾಂಡ್​ಗೆ ಇನ್ನೂ ಐದು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ.

Exit mobile version