Site icon PowerTV

ಅವ್ರು ‘ಹೆತ್ತ ತಾಯಿಯನ್ನ ತುಳಿದು’ ಹೋಗಿದ್ದಾರೆ : ಶೋಭಾ ಕರಂದ್ಲಾಜೆ ಫುಲ್ ಗರಂ

ಬೆಂಗಳೂರು : ಬಿಜೆಪಿ ಟಿಕೆಟ್ ಕೈತಪ್ಪಿರುವ ಕಾರಣ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಫುಲ್ ಗರಂ ಆಗಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಾಜಿ ಸಿಎಂ​ ಜಗದೀಶ್ ಶೆಟ್ಟರ್ ಅವರು ಹೆತ್ತ ತಾಯಿಯನ್ನು ತುಳಿದು ಹೋಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿಯಲ್ಲಿ ಹಿರಿಯರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಜಗದೀಶ್​ ಶೆಟ್ಟರ್​ ಅವರಿಗೆ ನಮ್ಮ ಪಕ್ಷ ಏನು ಕಡಿಮೆ ಮಾಡಿತ್ತು? ಜಗದೀಶ್ ಶೆಟ್ಟರ್​ ಅವರನ್ನು ಶಾಸಕ, ಮಂತ್ರಿ, ವಿಪಕ್ಷ ನಾಯಕ, ಮುಖ್ಯಮಂತ್ರಿ ಮಾಡಿತ್ತು . ಬಿ.ಎಲ್​.ಸಂತೋಷ್​ ಬಗ್ಗೆ ಜಗದೀಶ್ ಶೆಟ್ಟರ್ ಅವರಿಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ‘ಸೋಮಣ್ಣನನ್ನು ಹರಕೆಯ ಕುರಿ’ ಮಾಡಿದ್ದಾರೆ : ಸಿದ್ದು ಲೇವಡಿ

.30 ಬಳಿಕ ರಾಜ್ಯಕ್ಕೆ ಮೋದಿ

ರಾಷ್ಟ್ರೀಯ ನಾಯಕರ ರಾಜ್ಯ ಪ್ರವಾಸ ಕುರಿತು ಪ್ರತಿಕ್ರಿಯಿಸಿರುವ ಅವರು, ಏಪ್ರಿಲ್ 30ರ ಬಳಿಕ ಪ್ರಧಾನಿ ಮೋದಿ ರಾಜ್ಯ ಪ್ರವಾಸ ಮಾಡುತ್ತಾರೆ. ಈಗಾಗಲೇ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಯೋಗಿ ಆದಿತ್ಯನಾಥ್, ಅಮಿತ್ ಶಾ ಸೇರಿ ಹಲವರು ಬರಲಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಸ್ಪಷ್ಟ ಬಹುಮತ

ಜಗದೀಶ್ ಶೆಟ್ಟರ್‌ ಅಥವಾ ಬೇರೆಯವರು ಪಕ್ಷ ಬಿಟ್ಟಿದ್ದರಿಂದ ಪರಿಣಾಮ ಬೀರಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Exit mobile version