Site icon PowerTV

ಕಟೀಲ್ ಆಡಿಯೋ ವೈರಲ್ ಆಗಿತ್ತು, ಈಗ ಅದೇ ರೀತಿ ಆಗಿದೆ : ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ನಾಯಕರ ಷಡ್ಯಂತ್ರ ಹಾಗೂ ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು ಬಹಿರಂಗ ಪಡಿಸಿದ್ದಾರೆ. ಇದೀಗ, ಕಟೀಲ್ ವಿರುದ್ಧವೂ ಅರೋಪ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೆಲ ದಿನಗಳ ಹಿಂದೆ ಮಾತಾಡಿದ್ದ ಆಡಿಯೋ ವೈರಲ್​ ಆಗಿತ್ತು. ಅವರ ಹೇಳಿಕೆ ಈಗ ಸತ್ಯ ಆಗಿದೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಕಾಲ ಮುಗೀತು ಅಂದ್ರು

ನಳಿನ್ ಕುಮಾರ್ ಕಟೀಲ್ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರ ಕಾಲ ಮುಗಿತು, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಜಗದೀಶ್​ ಶೆಟ್ಟರ್ ಅವರ ಕಾಲ​​ ಮುಗಿಸುತ್ತೇವೆ ಎಂದಿದ್ದರು. ಈಗ ಅದೇ ರೀತಿ ಆಗಿದೆ ಎಂದು ಜಗದೀಶ್​ ಶೆಟ್ಟರ್ ವಾಗ್ದಾಳಿ ನಡೆಸಿದಿದ್ದಾರೆ.

ಇದನ್ನೂ ಓದಿ : ಜಗದೀಶ್ ಶೆಟ್ಟರ್ ವಿರುದ್ಧ ಗೆದ್ದು ಬರ್ತೀವಿ : ಮಹೇಶ ಟೆಂಗಿನಕಾಯಿ

ಕೆಲವರ ಕಪಿಮುಷ್ಠಿಯಲ್ಲಿ ಬಿಜೆಪಿ

ರಾಜ್ಯದಲ್ಲಿ ನಮ್ಮ ಕಣ್ಮುಂದೆಯೇ ಬಿಜೆಪಿ ಹಾಳಾಗುತ್ತೆ. ಬಿಜೆಪಿಯವರು ಯಾಕೆ ಗ್ರೌಂಡ್​ ರಿಪೋರ್ಟ್​ ಕೊಡಲಿಲ್ಲ. ಅರುಣ್ ಸಿಂಗ್​, ಧರ್ಮೇಂದ್ರ ಪ್ರಧಾನ್​ ನನ್ನ ಕರೆದು ಮಾತಾಡಿಲ್ಲ. ರಾಜ್ಯದಲ್ಲಿ ಬಿಜೆಪಿ ಕೆಲವರ ಕಪಿಮುಷ್ಠಿಯಲ್ಲಿ ಸಿಲುಕಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕೆ.ಅಣ್ಣಾಮಲೈ ಅವರಿಗೆ ರಾಜ್ಯದ ಒಂದೇ ಒಂದು ಕ್ಷೇತ್ರದ ಬಗ್ಗೆಯೂ ಮಾಹಿತಿ ಇಲ್ಲ. ಒಂದು ಚುನಾವಣೆ ಗೆಲ್ಲದಿರುವವರು ಚುನಾವಣಾ ಸಹ ಉಸ್ತುವಾರಿ. ನಮ್ಮ ಕೆಳಗೆ ಕೆಲಸ ಮಾಡಿದ ಅಧಿಕಾರಿ ಹಿಂದೆ ನಾವು ಕೂರಬೇಕು. ಕೋರ್​ ಕಮಿಟಿಯಲ್ಲಿ ಕಟೀಲು ಹೆಸರು ಸೇರಿಸಿದ್ದೇ ಸಂತೋಷ್. ಕಟೀಲು ಅವಧಿ ಮುಗಿದಿದ್ದರೂ ರಾಜ್ಯ ಬಿಜೆಪಿಗೆ ಅಧ್ಯಕ್ಷರ ನೇಮಕ ಆಗಿಲ್ಲ. ಬಿ.ಎಲ್​.ಸಂತೋಷ್​ ಹೇಳಿದಂತೆ ನಳಿನ್​ ಕುಮಾರ್​​ ಕೇಳುತ್ತಾರೆ ಎಂದು ಕಿಡಿಕಾರಿದ್ದಾರೆ.

Exit mobile version