Site icon PowerTV

ನಾನೇನು ಹೋಗಿ ಜೈಲಿನಲ್ಲಿ ಇರಲೇ? : ಬಿಜೆಪಿ ನಾಯಕರಿಗೆ ಶೆಟ್ಟರ್ ಪ್ರಶ್ನೆ

ಹುಬ್ಬಳ್ಳಿ : ನಾನೇನು ಹೋಗಿ ಜೈಲಿನಲ್ಲಿ ಇರಲೇ? ಅಥವಾ ಜನರನ್ನು ದೂರ ಇಟ್ಟು ಬಂಗ್ಲೆಯಲ್ಲಿ ಇರಲೇ?ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಮಲ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ರಾಜಕಾರಣದಿಂದ ನಿವೃತ್ತಿ ಹೊಂದುತ್ತೇನೆ ಅಂತ ಹೇಳಿಕೆ ಕೊಡಿ ಅಂತ ಹೇಳಿದ್ರು ಎಂದು ಬೇಸರ ಹೊರಹಾಕಿದ್ದಾರೆ.

ನಾನೇನು ಹುಡುಗನೇ?

ರಾಜ್ಯಸಭಾ ಸದಸ್ಯರಾಗೋದನ್ನು ತಿರಸ್ಕರಿಸಿದ್ದೇನೆ. ತಾವು ಕಳಿಸಿದ ಪತ್ರಕ್ಕೆ ಸಹಿ ಹಾಕಿ ಕಳಿಸುವಂತೆ ಹೇಳಿದ್ದರು. ಅವರು ಹೇಳಿದಂತೆ ಕೇಳಲು ನಾನೇನು ಹುಡುಗನೇ ಎಂದು ಜಗದೀಶ್ ಶೆಟ್ಟರ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : ಜಗದೀಶ್ ಶೆಟ್ಟರ್​ನ ಅಪ್ಪಿ ಪತ್ನಿ ಶಿಲ್ಪಾ ಶೆಟ್ಟರ್ ಕಣ್ಣೀರು

ಫ್ಲಡ್ ಗೇಟ್ ಓಪನ್ ಆಗುತ್ತೆ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಡ ತಂತ್ರ ಮಾಡುತ್ತಿದ್ದಾರೆ. ಜಿಲ್ಲಾಧ್ಯಕ್ಷರ ಮೂಲಕ ಒತ್ತಡ ತರುತ್ತಿದ್ದಾರೆ. ಆದರೆ, ಫ್ಲಡ್ ಗೇಟ್ ಓಪನ್ ಆದಂತಹ ಸ್ಥಿತಿ‌ ಮುಂದೆ ಬರಲಿದೆ. ಚುನಾಯಿತ ಪ್ರತಿನಿಧಿಗಳಿಗೆ ರಾಜೀನಾಮೆ ಕೊಡೋದು ಬೇಡ ಅಂತ ಹೇಳಿದ್ದೇನೆ ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರ ಬರುವ ಅವಕಾಶವಿತ್ತು

ಈ ಬಾರಿ ಅಧಿಕಾರಕ್ಕೆ ಬರೋಕೆ ಬಿಜೆಪಿ ಗೆ ಅವಕಾಶವಿತ್ತು. ಆದರೆ ಕೆಲವೊಬ್ಬರಿಗೆ ಬಿಜೆಪಿ ಅಧಿಕಾರಕ್ಕೆ ಬರೋದು ಬೇಡ ಅನಿಸುತ್ತಿದೆ. ಹಾಗಾಗಿಯೇ ಪ್ರಮುಖ ನಾಯಕರ ವಿರುದ್ಧ ಷಡ್ಯಂತ್ರ ಮಾಡಿಕೊಡು ಬಂದಿದ್ದಾರೆ. ಕಳೆದ ಒಂದು ವರ್ಷದಿಂದಲೂ ಈ ಪಿತೂರಿ ನಡೆದಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆ ನಂತರ ಕ್ಷೇತ್ರದಾದ್ಯಂತ ಪ್ರಚಾರ ಮಾಡುತ್ತೇನೆ. ಕಾಂಗ್ರೆಸ್ ನಲ್ಲಿ ಸರ್ವಾನುಮತದಿಂದ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಕರೆದ ಕಡೆ ಕಾಂಗ್ರೆಸ್ ಪರ ಪ್ರಚಾರ ಮಾಡ್ತೀನಿ. ಬಿಜೆಪಿಯನ್ನು ಬೈದರೆ ಉದ್ಧಾರ ಆಗ್ತೇನಾ? ಸಂದರ್ಭ ಬಂದಾಗ ಟೀಕೆ ಮಾಡೇ ಮಾಡ್ತಿನಿ ಎಂದು ಹೇಳಿದ್ದಾರೆ.

Exit mobile version