Site icon PowerTV

ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ : ಶಿವಮೊಗ್ಗ ಟಿಕೆಟ್ ಹೋಲ್ಡ್

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ ಹೈಕಮಾಂಡ್ ಇದೀಗ ಮೂರನೇ ಪಟ್ಟಿಯನ್ನು ಘೋಷಿಸಿದೆ.

ಈ ಹಿಂದೆ ಎರಡು ಪಟ್ಟಿಗಳಲ್ಲಿ 212 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿತ್ತು. ಮೂರನೇ ಪಟ್ಟಿಯಲ್ಲಿ 10೧೦ ಮಂದಿ ಸ್ಥಾನ ಪಡೆದಿದ್ದಾರೆ. ಇನ್ನೂ ಎರಡು ಕ್ಷೇತ್ರಗಳಿಗೆ ಟಿಕೆಟ್ ಹೋಲ್ಡ್ ಮಾಡಿದೆ.

ಇದನ್ನೂ ಓದಿ : BSY ಕೂಡ ಕಾಂಗ್ರೆಸ್​ಗೆ ಬರಬಹುದು : ಶಾಮನೂರು ಸ್ಫೋಟಕ ಹೇಳಿಕೆ

3ನೇ ಪಟ್ಟಿಯಲ್ಲಿ ಟಿಕೆಟ್ ಪಡೆದವರು

ಹುಬ್ಬಳ್ಳಿ-ಧಾರವಾಡ ಕೇಂದ್ರಕ್ಕೆ ಮಹೇಶ್ ಟೆಂಗಿನಕಾಯಿ, ಗೋವಿಂದರಾಜನಗರ ಕ್ಷೇತ್ರಕ್ಕೆ ಉಮೇಶ್ ಶೆಟ್ಟಿ, ಮಹದೇವಪುರ ಕ್ಷೇತ್ರಕ್ಕೆ ಮಂಜುಳಾ(ಅರವಿಂದ್ ಲಿಂಬಾವಳಿ ಪತ್ನಿ), ಕೃಷ್ಣರಾಜ ಕ್ಷೇತ್ರಕ್ಕೆ ಶ್ರೀವತ್ಸ, ಹೆಬ್ಬಾಳ ಕ್ಷೇತ್ರಕ್ಕೆ ಕಟ್ಟಾ ಜಗದೀಶ್, ನಾಗಠಾಣ ಕ್ಷೇತ್ರಕ್ಕೆ ಸಂಜೀವ್ ಐಹೊಳೆ, ಸೇಡಂ ಕ್ಷೇತ್ರಕ್ಕೆ ರಾಜ್ ಕುಮಾರ್ ಪಾಟೀಲ್, ಕೊಪ್ಪಳ ಕ್ಷೇತ್ರಕ್ಕೆ ಮಂಜುಳಾ ಅಮರೇಶ್, ರೋಣ ಕ್ಷೇತ್ರಕ್ಕೆ ಕಳಕಪ್ಪ ಬಂಡಿ ಹಾಗೂ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಟಿಕೆಟ್ ಬಿ.ರಾಮಣ್ಣ ಪಾಲಾಗಿದೆ.

Exit mobile version