Site icon PowerTV

IPL 2023 : ಐಪಿಎಲ್​ನಲ್ಲಿಂದು ಡಬಲ್​ ಧಮಾಕ ; ರೋಹಿತ್ ಪಡೆಗೆ ಕೆಕೆಆರ್ ಸವಾಲ್

IPLನ 16ನೇ ಆವೃತ್ತಿಯಲ್ಲಿಂದು ಡಬಲ್ ಧಮಾಕ ಪಂದ್ಯಗಳು ನಡೆಯಲ್ಲಿದೆ.ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ನಿತೀಶ್ ರಾಣ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ (MI vs KKR) ಮುಖಾಮುಖಿಯಾಗಲಿದ್ದಾರೆ.

ಹೌದು, ಇಂದಿನ ಎರಡನೇ ಪಂದ್ಯ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಹಾರ್ದಿಕ್ ಪಾಂಡ್ಯ ಅವರ ಗುಜರಾತ್ ಟೈಟಾನ್ಸ್ ತಂಡ ಸಂಜು ಸ್ಯಾಮ್ಸನ್ ನಾಯಕನಾಗಿರುವ ರಾಜಸ್ಥಾನ್ ರಾಯಲ್ಸ್ (GT vs RR) ಸವಾಲನ್ನು ಎದುರಿಸಲಿದೆ. ಐಪಿಎಲ್​ನಲ್ಲಿಂದು ಹೈವೋಲ್ಟೇಜ್ ಮ್ಯಾಚ್ ಆಗುವುದು ಖಚಿತ.

ಮುಂಬೈ ಇಂಡಿಯನ್ಸ್ ತಂಡ

ನಾಯಕ ರೋಹಿತ್ ಶರ್ಮಾ ಫಾರ್ಮ್​, ನೇತೃತ್ವದಲ್ಲಿ  ಇಶಾನ್ ಕಿಶನ್ ,ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ,ಡೇವಿಡ್, ಕ್ಯಾಮ್ರೋನ್ ಗ್ರೀನ್, ನೇಹಲ್ ವಡೇರಾ,ಜೇಸನ್ ಬೆಹ್ರೆಂಡರ್ಫ್, ರಿಲೆ ಮೆರೆದಿತ್, ಪಿಯೂಷ್ ಚಾವ್ಲಾ ತಂಡದಲ್ಲಿ ಇರಲಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ

ನಾಯಕ ನಿತೀಶ್ ರಾಣ ನೇತೃತ್ವದಲ್ಲಿ ರಿಂಕು ಸಿಂಗ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಇನ್ನೂ ಎನ್. ಜಗದೀಸನ್, ವೆಂಕಟೇಶ್ ಅಯ್ಯರ್ ರೆಹ್ಮಾನುಲ್ಲ ಗುರ್ಬಜ್, ಶಾರ್ದೂಲ್ ಥಾಕೂರ್, ಸುನಿಲ್ ನರೈನ್, ವರುಣ್ ಚಕ್ರವರ್ತಿ, ಲೂಕಿ ಫರ್ಗುಸನ್, ಉಮೇಶ್ ಯಾದವ್, ಸುಯೇಶ್ ಶರ್ಮಾ ಪ್ರಮುಖರು ತಂಡದಲ್ಲಿ ಇರಲಿದ್ದಾರೆ.

ಗುಜರಾತ್ ಟೈಟಾನ್ಸ್ ತಂಡ

ಹಾರ್ದಿಕ್ ಪಾಂಡ್ಯ, ವೃದ್ದಿಮಾನ್ ಸಾಹ ಹಾಗೂ ಶುಭ್​ಮನ್ ಗಿಲ್, ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ಶಮಿ, ಅಲ್ಜರಿ ಜೋಸೆಫ್, ಜೋಶ್ವಾ ಲಿಟಲ್, ರಶೀದ್ ಖಾನ್ ಹಾಗೂ ಮೋಹಿತ್ ಶರ್ಮಾ ತಂಡದಲ್ಲಿ ಇರಲಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡ

ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್, ಶಿಮ್ರೋನ್ ಹೆಟ್ಮೇರ್ ,ಜೇಸನ್ ಹೋಲ್ಡರ್ , ಆರ್. ಅಶ್ವಿನ್ ಯುಜ್ವೇಂದ್ರ ಚಹಲ್ , ಸಂದೀಪ್ ಶರ್ಮಾ, ಕುಲ್ದೀಪ್ ಸೇನ್, ಆ್ಯಡಂ ಝಂಪಾ ತಂಡದಲ್ಲಿ ಇರಲಿದ್ದಾರೆ.

Exit mobile version