Site icon PowerTV

ಸ್ವಪಕ್ಷದ ವಿರುದ್ಧವೇ ಸಿದ್ದು ಆಪ್ತ ಜಮೀರ್ ಅಹ್ಮದ್ ಕಿಡಿ

ಬೆಂಗಳೂರು : ತಮ್ಮ ಬೆಂಬಲಿಗನಿಗೆ ಟಿಕೆಟ್ ನೀಡದಕ್ಕೆ ಶಾಸಕ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಮುನಿಸಿಕೊಂಡಿದ್ದಾರೆ ಎನ್ನಲಾಗಿದ್ದು ರಾಹುಲ್ ಗಾಂಧಿ ಹಾಜರಿರುವ ಕಾರ್ಯಕ್ರಮದಲ್ಲಿ ಗೈರು ಹಾಜರಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಶಾಸಕ ಅಖಂಡ ಶ್ರೀನಿವಾಸ್ ಅವರಿಗೆ ಟಿಕೆಟ್ ಹೊಲ್ಡ್ ಮಾಡಿರುವುದಕ್ಕೆ ಜಮೀರ್ ಅಹ್ಮದ್ ಅಸಮಧಾನ ವ್ಯಕ್ತಪಡಿಸಿದ್ದು ಕೋಲಾರ ಜೈ ಭಾರತ್ ಸಮಾವೇಶಕ್ಕೆ ಗೈರಾಗಿದ್ದಾರೆ. ಆ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಕೂಡ ಹಾಜರಿದ್ದರು. ಈ ಮೂಲಕ ಹೈಕಮಾಂಡ್ ನಾಯಕರ ಮೇಲೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಅಖಂಡ ಶ್ರೀನಿವಾಸ್ ಪರವಾಗಿ ಜಮೀರ್ ಅಹ್ಮದ್ ಟಿಕೆಟ್ ಗೆ ಬ್ಯಾಟಿಂಗ್ ಮಾಡಿದ್ದು, ಈಗಾಗಲೇ ಹಲವು ಬಾರಿ ದೆಹಲಿಗೆ ಹೋಗಿ ಬಂದಿದ್ದಾರೆ. ಆದರೂ, ಪುಲಕೇಶಿನಗರ ಟಿಕೆಟ್​ ಅಖಂಡ ಶ್ರಿನಿವಾಸ್ ಅವರಿಗೆ ನೀಡಿಲ್ಲ.

ರಾಜೀನಾಮೆಗೆ ಮುಂದಾದ ಶ್ರೀನಿವಾಸ್

ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಯಾದ್ರೂ ಪುಲಿಕೇಶಿನಗರ ಮಾತ್ರ ಸಸ್ಪೆನ್ಸ್ ಆಗಿದೆ. ಹೀಗಾಗಿ, ಕಾಂಗ್ರೆಸ್​ನಲ್ಲಿ ಪುಲಕೇಶಿನಗರ ಟಿಕೆಟ್ ವಿಚಾರ ಕುತೂಹಲ ಮೂಡಿಸಿದೆ. ಈಗಾಗಲೇ, ಹಾಲಿ ಶಾಸಕ ಅಖಂಡ ಶ್ರೀನಿವಾಸ್ ರಾಜೀನಾಮೆಗೆ ಮುಂದಾಗಿದ್ದಾರೆ. ಬೆಂಬಲಿಗರ ಸಭೆಯಲ್ಲಿ ಅಖಂಡ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : ಇಲ್ಲಿದೆ ಸಿಎಂ ಬೊಮ್ಮಾಯಿ ಆಸ್ತಿ ವಿವರ : 5.79 ಕೋಟಿ ಸಾಲಗಾರ

ಇನ್ನೂ ಪಕ್ಷೇತರರಾಗಿ ಸ್ಪರ್ಧಿಸುವಂತೆ ಬೆಂಬಲಿಗರ ಒತ್ತಾಯ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್​​ಗೆ ರಾಜೀನಾಮೆ ನೀಡಲು ಅಖಂಡ ನಿರ್ಧರಿಸಿದ್ದಾರೆ. ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಅವರಭೇಟಿಗೆ ಸಮಯಾವಕಾಶ ಕೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಂದಲೇ ನನಗೆ ಅನ್ಯಾಯ ಆಗಿದೆ ಎಂದು ಅಖಂಡ ಶ್ರಿನಿವಾಸ್ ಅಸಮಾಧಾನ ಹೊರಹಾಕಿದ್ದಾರೆ. ಇನ್ನೂ ಸಿದ್ದರಾಮಯ್ಯ ಆಪ್ತರಾಗಿರುವ ಶಾಸಕ ಜಮೀರ್ ಅಹ್ಮದ್ ಸಹ ಈ ಬಗ್ಗೆ ಬೇಸರಗೊಂಡಿದ್ದಾರೆ. ಇದೆಲ್ಲದರ ಪರಿಣಾಮ, ಅಖಂಡ ಶ್ರೀನಿವಾಸ್ ಕಾಂಗ್ರೆಸ್ ಗೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ.

Exit mobile version