Site icon PowerTV

‘ಬೋ..ಮಗ, ಸೂ.. ಮಗ’ ಎಂದು ಬೊಮ್ಮಾಯಿ ವಿರುದ್ಧ ಓಲೇಕಾರ್ ಕಿಡಿ

ಬೆಂಗಳೂರು : ಬಿಜೆಪಿ ಟಿಕೆಟ್ ಕೈತಪ್ಪಿರುವ ಬೆನ್ನಲ್ಲೇ ಶಾಸಕ ನೆಹರೂ ಒಲೇಕಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ದ ನಾಲಿಗೆ ಹರಿ ಬಿಟ್ಟದ್ದಾರೆ.

ಹಾವೇರಿಯಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ದ ವಾಗ್ದಾಳಿ ನಡೆಸಿರುವ ಅವರು, ‘ಬೋ.. ಮಗ, ಸೂ.. ಮಗ’ ಎಂದು ಅವಾಚ್ಯ ಪದಗಳನ್ನು ಬಳಸಿದ್ದಾರೆ.

ಬೊಮ್ಮಾಯಿ ವೈಯಕ್ತಿಕ‌ ದ್ವೇಷ ಸಾದಿಸುತ್ತಿದ್ದಾನೆ. ಹಿಂದಿನ ಸಲ ಟಿಕೆಟ್ ತಪ್ಪಿಸಲು ಪ್ರಯತ್ನ ಮಾಡಿದ್ದರು. ಕೊನೆಯ ದಿನ ಬಿ ಫಾರ್ಮ್ ಸಿಕ್ಕಿತ್ತು. ಇದಕ್ಕೆ ಕಾರಣ ಬಸವರಾಜ ಬೊಮ್ಮಾಯಿ. ನೆಹರೂ ನನ್ನ ಲೆವೆಲ್ ಗೆ ಬೆಳೆಯುತ್ತಾನೆ ಎಂದು ಟಿಕೆಟ್ ತಪ್ಪಿಸಿದ್ದಾನೆ ಎಂದು ಏಕವಚನದಲ್ಲೇ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು

ಬಿಜೆಪಿಗೆ ಓಲೇಕಾರ್​ ಗುಡ್ ಬೈ

ಟಿಕೆಟ್​ ಮಿಸ್ ಆದ ಹಿನ್ನೆಲೆ ಬಿಜೆಪಿ ಪಾಳಯದಲ್ಲಿ ರಾಜೀನಾಮೆ ಪರ್ವ ಮುಂದುವರಿದಿದೆ. ಅದರಂತೆ  ಶಾಸಕ ನೆಹರೂ ಓಲೇಕಾರ್​ ಸಹ ಬಿಜೆಪಿಗೆ ಗುಡ್ ಬೈ ಹೇಳಿದ್ದರು. ಹುಕ್ಕೇರಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

1000 ಬೆಂಬಲಿಗರು ರಾಜೀನಾಮೆ ನೀಡ್ತಾರೆ

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಅವರು, ಸುಮಾರು 1000 ಬೆಂಬಲಿಗರು ಕಾರ್ಯಕರ್ತರು ನನ್ನ ಜೊತೆ ರಾಜೀನಾಮೆ ನೀಡುತ್ತಾರೆ. ಜೆಡಿಎಸ್ ನಿಂದ  ಆಹ್ವಾನ ಬಂದಿದೆ. ಕಾರ್ಯಕರ್ತರ ಜತೆ ಮಾತನಾಡಿ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದರು.

Exit mobile version