Monday, August 25, 2025
Google search engine
HomeUncategorizedJDS Manifesto : JDS ‘ಭರವಸೆ ಪತ್ರ’ ಬಿಡುಗಡೆ

JDS Manifesto : JDS ‘ಭರವಸೆ ಪತ್ರ’ ಬಿಡುಗಡೆ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ (Assembly Election) ದಿನಗಣನೆ ಪ್ರಾರಂಭವಾಗಿದೆ. ಈ ಹೊತ್ತಲ್ಲೇ ಮಾಜಿ ಪ್ರಧಾನಿ ದೇವೇಗೌಡ (HD Deve Gowda) ಜೆಡಿಎಸ್ (JDS) ಪಕ್ಷದಿಂದ ಭರವಸೆ ಪತ್ರ ಬಿಡುಗಡೆ ಮಾಡಿದ್ದಾರೆ.

ಹೌದು, ರಾಷ್ಟ್ರೀಯ ಪಕ್ಷಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿರುವ ಜೆಡಿಎಸ್ (JDS) ಪಂಚರತ್ನ ರಥಯಾತ್ರೆ (Pancharatna Rath Yatra) ಮೂಲಕ ಮತದಾರರ ಒಲೈಕೆಗಾಗಿ ಕಸರತ್ತು ನಡೆಸುತ್ತಿದ್ದು, ಈ ಬಾರಿ ಚುನಾವಣೆಯಲ್ಲಿ ಭರ್ಜರಿ ಜಯಶಾಲಿಯಾಗಲು ವಿಭಿನ್ನವಾಗಿ ಜೆಡಿಎಸ್​ ಭರವಸೆ ಪತ್ರ ರಿಲೀಸ್ ಮಾಡಿದ್ದಾರೆ.

ಈ ಬಗ್ಗೆ ತಿಳಿಸಿರುವ ದೇವೇಗೌಡ, ಪ್ರಣಾಳಿಕೆ ಕಾರ್ಯಕ್ರಮವನ್ನು ಮುಂದೆ ಮಾಡಲಿದ್ದೇವೆ. ಈಗ ಜೆಡಿಎಸ್‌ನಿಂದ ಭರವಸೆ ಪತ್ರವನ್ನು ಬಿಡುಗಡೆ ಮಾತ್ರ  ಮಾಡುತ್ತಿದ್ದೇವೆ. ಎಂದು ಹೇಳಿಕೆ ನೀಡಿದ್ದಾರೆ.

ಭರವಸೆ ಪತ್ರದಲ್ಲಿ ಏನೆಲ್ಲಾ ಇದೆ

  1. ರೈತ ಚೈತನ್ಯ ಯೋಜನೆ ಮೂಲಕ ಪ್ರತಿ ಎಕರೆಗೆ 10 ಸಾವಿರ ರೂಪಾಯಿ ಸಹಾಯ ಧನ
  2. ಪ್ರತಿ ಕೃಷಿ ಕಾರ್ಮಿಕ ಕುಟುಂಬಕ್ಕೆ ಮಾಸಿಕ 2 ಸಾವಿರ ರೂಪಾಯಿ
  3. ರೈತ ಯುವಕರನ್ನು ಮದುವೆಯಾದ್ರೆ ಯುವತಿಯರಿಗೆ 2 ಲಕ್ಷ ನಗದು
  4. ವಾರ್ಷಿಕ 5 ಗ್ಯಾಸ್ ಸಿಲಿಂಡರ್​ ನೀಡುವುದಾಗಿ ಘೋಷಣೆ
  5. ಗರ್ಭಿಣಿಯರಿಗೆ 6 ತಿಂಗಳ ಕಾಲ 6000 ರೂ ಭತ್ಯೆ
  6. ಹಿರಿಯ ನಾಯಕರ ಮಾಶಾಸನ 1200 ರಿಂದ 5000ಕ್ಕೆ ಹೆಚ್ಚಳ
  7. ದಿವ್ಯಾಂಗ ಚೇತನರ ಪಿಂಚಣಿ 600ರಿಂದ 2500ಕ್ಕೆ ಏರಿಕೆದುಬಾರಿ ವೆಚ್ಚದ ವೈದ್ಯಕೀಯ ಆಪರೇಷನ್​ಗಳಿಗೆ 25 ಲಕ್ಷದವರೆಗೆ 24 ಗಂಟೆಗಳಲ್ಲಿ ಪರಿಹಾರ
  8. 18 ವರ್ಷ ತುಂಬಿದ 60 ಸಾವಿರ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್
  9. ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ.
  10. ಪೊಲೀಸರಿಗೂ ಗುಡ್ ನ್ಯೂಸ್ ಕೊಟ್ಟ ಕುಮಾರಸ್ವಾಮಿ
  11. ಔರಾದ್ಕರ್ ವರದಿ ಅನುಷ್ಠಾನಗೊಳಿಸುವ ಭರವಸೆ
  12. ವಕೀಲರ ರಕ್ಷಣೆಗೆ ಕಾಯ್ದೆ ಜಾರಿಗೊಳಿಸಲು ಜೆಡಿಎಸ್ ನಿರ್ಧಾರ
  13. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿ ಭರವಸೆ.
  14. ಅಲ್ಪಸಂಖ್ಯಾತರಿಗೂ ಶುಭಸುದ್ದಿ ಕೊಟ್ಟ ಕುಮಾರಣ್ಣ
  15. ವಕ್ಫ್​ ಆಸ್ತಿ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಮಿತಿ ರಚನೆ.

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments