Site icon PowerTV

ಜೆಡಿಎಸ್​ ಸೇರ್ಪಡೆಯಾದ ಎನ್​.ಆರ್​. ಸಂತೋಷ್​​​

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳೂ ಮಾತ್ರ ಬಾಕಿ ಉಳಿದಿದೆ. ಬಿಜೆಪಿ ತನ್ನಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ತಕ್ಷಣ ಕೈ ತಪ್ಪಿದ ಟಿಕೆಟ್ ಅಭ್ಯರ್ಥಿಗಳು ತಮ್ಮ ಪಕ್ಷ ಬಿಟ್ಟು ಬೇರೆ ಪಕ್ಷ ಸೇರಲು ಸಿದ್ದರಾಗಿದ್ದಾರೆ.

ಹೌದು,ಇನ್ನೂ ಕಡೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಿದಂತೆಯೇ ಜೆಡಿಎಸ್ ಪಕ್ಷ ಅರಸಿಕೆರೆ ಅಭ್ಯರ್ಥಿಯನ್ನೂ ಬದಲಿಸಲು ಚಿಂತನೆ ನಡೆಸಿದೆ.

ಇದನ್ನೂ ಓದಿ : ಎರಡೇ ದಿನದಲ್ಲಿ ‘ಯೂಟರ್ನ್’ ಹೊಡೆದ ಬಿಜೆಪಿ ಶಾಸಕ ಅಂಗಾರ

ಬಿಜೆಪಿಗೆ ಸೆಡ್ಡು ಹೊಡೆದ ಬಿ.ಎಸ್​​. ಯಡಿಯೂರಪ್ಪ ಆಪ್ತರಾಗಿದ್ದ ಎನ್ ಆರ್ ಸಂತೋಷ್ ಅರಸಿಕೆರೆಯಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಕೈತಪ್ಪಿದ ಕಾರಣ ಜೆಡಿಎಸ್ ಗೆ ಇಂದು ಸೇರ್ಪಡೆಯಾಗಿದ್ದಾರೆ.

ಬಿಜೆಪಿಯಿಂದ ಜಿವಿಟಿ ಬಸವರಾಜ್ ಗೆ ಟಿಕೆಟ್ ನೀಡಲಾಗಿದ್ದರೆ, ಜೆಡಿಎ ನಾಯಕ ಹೆಚ್ ಡಿ ರೇವಣ್ಣ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಎನ್ ಆರ್ ಸಂತೋಷ್ ಅವರೊಂದಿಗೆ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಜೆಡಿಎಸ್ ನಲ್ಲಿನ ಮೂಲಗಳ ಪ್ರಕಾರ, ಎನ್  ಆರ್ ಸಂತೋಷ್ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರಿಗೆ ಕರೆ ಮಾಡಿ ಅರಸಿಕೆರೆ ಟಿಕೆಟ್ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ನಡುವೆ ಎನ್ ಆರ್ ಸಂತೋಷ್ ಬೆಂಬಲಿಗರು ಬೆಂಗಳೂರಿನಲ್ಲಿರುವ ದೇವೇಗೌಡ ನಿವಾಸಕ್ಕೆ ತೆರಳಿ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ.

Exit mobile version