Site icon PowerTV

‘ಕೈ’ಗೆ ಕಗ್ಗಂಟಾಗೇ ಉಳಿದ 15 ಕ್ಷೇತ್ರಗಳು : ಸಿದ್ದುಗೆ ದಕ್ಕದ ಕೋಲಾರ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ 3ನೇ ಪಟ್ಟಿ ಬಿಡುಗಡೆ ಮಾಡಿದ್ದು, 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನೂ 15 ಕ್ಷೇತ್ರಗಳು ಕಗ್ಗಂಟಾಗೇ ಉಳಿದಿದೆ.

ಬೆಂಗಳೂರಿನ ಪುಲಿಕೇಶಿನಗರ, ಸಿ.ವಿ. ರಾಮನ್​​​​ ನಗರ, ಶಿಗ್ಗಾವಿ, ಶಿಡ್ಲಘಟ್ಟ, ಅರಕಲಗೂಡು, ಕೆ.ಆರ್‌.ಪುರ, ಮಂಗಳೂರು ಉತ್ತರ, ರಾಯಚೂರು ಸಿಟಿ, ಹುಬ್ಬಳ್ಳಿ ಸೆಂಟ್ರಲ್‌ ಹರಿಹರ, ಶ್ರವಣಬೆಳಗೊಳ, ಮುಳಬಾಗಿಲು, ರಾಯಚೂರುನಗರ, ಚಿಕ್ಕಮಗಳೂರು ಕ್ಷೇತ್ರಗಳನ್ನ ಕಾಂಗ್ರೆಸ್​​​ ಬಾಕಿ ಉಳಿಸಿಕೊಂಡಿದೆ.

ಈಗಾಗಲೇ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಇದೀಗ 43 ಕ್ಷೇತ್ರಗಳಿಗೆ ಮೂರನೇ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈ 43 ಅಭ್ಯರ್ಥಿಗಳ ಪಟ್ಟಿಯಲ್ಲಿ 16 ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.

ಇದನ್ನೂ ಓದಿ : ದೇವೇಗೌಡ್ರು ಆದೇಶದಂತೆ ‘ದತ್ತಾ’ ಪಾಲಾದ ಕಡೂರು ಜೆಡಿಎಸ್ ಟಿಕೆಟ್

ಸಿದ್ದುಗಿಲ್ಲ ಕೋಲಾರ ಟಿಕೆಟ್

ಇನ್ನು ಮುಖ್ಯವಾಗಿ ಸಿದ್ದರಾಮಯ್ಯ ಅವರಿಗೆ ಕೋಲಾರ ಟಿಕೆಟ್​ ನೀಡಲ್ಲ. ಬದಲಿಗೆ ಕೋಲಾರ ಟಿಕೆಟ್​ ಕೊತ್ತೂರು ಮಂಜುನಾಥ್ ಅವರಿಗೆ ನೀಡಲಾಗಿದೆ. ಇದರಿಂದ ಸಿದ್ದರಾಮಯ್ಯ ವರುಣಾದಿಂದ ಮಾತ್ರ ಸ್ಪರ್ಧೆ ಫಿಕ್ಸ್ ಆದಂತಾಗಿದೆ.

ವಿಜಯೇಂದ್ರ ವಿರುದ್ದ ಮಾಲ್ತೇಶ್

ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಪಾಲಾಗಿದೆ. ಇದೀಗ, ವಿಜಯೇಂದ್ರ ಅವರ ವಿರುದ್ಧ ಕಾಂಗ್ರೆಸ್ ನಿಂದ ಜಿ.ಬಿ. ಮಾಲ್ತೇಶ್‌ ಕಣಕ್ಕೆ ಇಳಿಯಲಿದ್ದಾರೆ. ಜಿ.ಬಿ.ಮಾಲ್ತೇಶ್‌ ಟಿಕೆಟ್‌ ನೀಡುವಂತೆ ಬೆಂಬಲಿಗರು ಒತ್ತಾಯಿಸಿದ್ದರು.

Exit mobile version