Site icon PowerTV

ಇಲ್ಲಿದೆ ಸಿಎಂ ಬೊಮ್ಮಾಯಿ ಆಸ್ತಿ ವಿವರ : 5.79 ಕೋಟಿ ಸಾಲಗಾರ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಆಸ್ತಿ ಘೋಷಿಸಿಕೊಂಡಿದ್ದು, 49.70 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದಾರೆ.

5.98 ಕೋಟಿ ರೂ. (ಅವಿಭಕ್ತ ಕುಟುಂಬದಿಂದ 1.57 ಕೋಟಿ ರೂ.) ಚರಾಸ್ತಿ, 42.15 ಕೋಟಿ ರೂ (ಅವಿಭಕ್ತ ಕುಟುಂಬದಿಂದ 19.2 ಕೋಟಿ ರೂ.) ಸ್ಥಿರಾಸ್ತಿ ಹೊಂದಿದ್ದಾರೆ. ಹುಬ್ಬಳ್ಳಿಯ ತಾರಿಹಾಳ ಬಳಿ 3 ಎಕರೆ ಜಮೀನು ಖರೀದಿಸಿದ್ದು, 1.50 ಕೋಟಿ ರೂ. ಮೌಲ್ಯದ ಚಿನ್ನಾಭರಣ, 3 ಲಕ್ಷ ರೂ. ನಗದು ಇದೆ. 5.79 ಕೋಟಿ ರೂ. ಸಾಲ ಮಾಡಿದ್ದು, ಪುತ್ರನಿಗೆ 14.74 ಲಕ್ಷ ರೂ, ಪುತ್ರಿಗೆ 2 ಲಕ್ಷ ರೂ. ಸಾಲ ನೀಡಿದ್ದಾರೆ.

ಬಸವರಾಜ ಬೊಮ್ಮಾಯಿ ಆಸ್ತಿವಿವರ

ಇದನ್ನೂ ಓದಿ : ಬಿಜೆಪಿ, ಜೆಡಿಎಸ್ ಎಲ್ಲರಿಗೂ ನಾನೇ ಟಾರ್ಗೆಟ್ : ಸಿದ್ದರಾಮಯ್ಯ

Exit mobile version