Site icon PowerTV

Weight Loss Tips: ಈ ಸಿಂಪಲ್ ಟಿಪ್ಸ್​ ಫಾಲೋ ಮಾಡಿದ್ರೆ ದೇಹದ ತೂಕ ಬೇಗ ಕಡಿಮೆಯಾಗುತ್ತೆ…

ಫಿಟ್​ ಆಗಿ ಕಾಣಬೇಕು ಅಂತ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ.. ಎಲ್ಲರಿಗೂ ಇಷ್ಡನೇ ಅಂದ್ರೆ ಅದನ್ನು ಪಡೆಯುವುದಕ್ಕಾಗಿ ಹಲವಾರು ಸಹಾಸಗಳಿಗೆ ಕೈ ಹಾಕುತ್ತಾರೆ. ಯುವಕರು ಮಾತ್ರ ಫಿಟ್​ ಆಗಿರುವುದನೇ ಒಂದು ಫ್ಯಾಷನ್ ಆಗಿ​ ಮಾಡಿಕೊಂಡಿದ್ದಾರೆ. ಬೆಳಗ್ಗೆ  ಎದ್ದು ಡಯಟ್, ವಾಕಿಂಗ್​,ರನ್ನಿಂಗ್​, ವ್ಯಾಯಾಮ, ಜಿಮ್‌ಗೆ ಹೋಗಿ ವರ್ಕೌಟ್ ಮಾಡ್ತಿದ್ರೆ ದೇಹದ ತೂಕ ಮಾತ್ರ ಕಡಿಮೆಯಾಗತ್ತಿಲ್ವಾ..?ಆಗಿದ್ರೆ ಚಿಂತಿಸಬೇಡಿ ,ನೀವು ಈ ಸಿಂಪಲ್ ಟಿಪ್ಸ್​ ಫಾಲೋ ಮಾಡಿದ್ರೆ ದೇಹದ ತೂಕ ಬೇಗ ಕಡಿಮೆಮಾಡಬಹುದು.

ತೂಕ (Weight) ಇಳಿಕೆಗೆ ಈ ಸಿಂಪಲ್ ಟಿಪ್ಸ್​ ಫಾಲೋ ಮಾಡಿ

  1. ಕಡಿಮೆ ಆಹಾರ ಸೇವನೆ ಮಾಡಿ : ಅತಿಯಾದರೆ ಅಮೃತ ಕೂಡ ವಿಷ್ಯನೇ ಆಗುತ್ತದೆ. ನಮ್ಮ ದೇಹಕ್ಕೆ ಎಷ್ಟು ಆಹಾರಬೇಕಗುತ್ತದೆಯೋ  ಅಷ್ಟೇ ಆಹಾರ ಸೇವನೆ ಮಾಡಿ
  2. ತಿಂದ ತಕ್ಷಣ ಬೆಡ್​ಗೆ ಹೋಗ್ಬೇಡಿ : ಊಟವಾದ್ಮೇಲೆ ಬಿಸಿ ಹೆಚ್ಚಿರುವ ಕಾರಣ ಕಣ್ಣು ಮುಚ್ಚಲು ಶುರುವಾಗುತ್ತದೆ. ಅನೇಕರು ಊಟವಾದ ತಕ್ಷಣ ನಿದ್ರೆ ಮಾಡ್ತಾರೆ. ಹಗಲಿರಲಿ ಇಲ್ಲ ರಾತ್ರಿಯಿರಲಿ ಊಟವಾದ ಮೇಲೆ ವಿಶ್ರಾಂತಿ ಮಾಡಿ, ನಿದ್ರೆಯನ್ನಲ್ಲ. ಸಾಧ್ಯವಾದಷ್ಟು ಮಲಗುವ 2 ಗಂಟೆ ಮೊದಲು ಆಹಾರ ಸೇವನೆ ಮಾಡಿ.
  3. ಡಯಟ್ ಫುಡ್ ಖರೀದಿ ಮಾಡಬೇಡಿ : ತೂಕ ಇಳಿಸಬೇಕು ಎಂದ ತಕ್ಷಣ  ಅನೇಕ ಜನರು ಡಯಟ್ ಫುಡ್ ಖರೀದಿಗೆ ಮುಂದಾಗ್ತಾರೆ. ಅದ್ರೆ ನೀವು ಈ ಡಯಟ್ ಫುಡ್ ಸೇವನೆ ಮಾಡಿಯೇ ತೂಕ ಇಳಿಸಿಕೊಳ್ಳಬೇಕಾಗಿಲ್ಲ. ಮನೆಯಲ್ಲಿರುವ ಆಹಾರದಿಂದಲೇ ನಿಮ್ಮ ತೂಕ ಕಡಿಮೆ ಮಾಡಬಹುದು.
  4. ಅತಿಯಾದ್ರೆ ವ್ಯಾಯಾಮವೂ ವಿಷವೇ : ತೂಕ ಇಳಿಸ್ಬೇಕು ಎನ್ನುವ ಕಾರಣಕ್ಕೆ ವ್ಯಾಯಾಮವನ್ನು ಅತಿಯಾಗಿ ಮಾಡಬೇಡಿ. ನಿಮ್ಮ ದೇಹಕ್ಕೆ ಅನುಗುಣವಾಗಿ ನೀವು ವ್ಯಾಯಾಮ ಮಾಡಬೇಕು. ವ್ಯಾಯಾಮ ಹೆಚ್ಚಾದ್ರೆ ಸಮಸ್ಯೆ ಶುರುವಾಗುತ್ತದೆ.
  5. ಆರೋಗ್ಯಕರ ಆಹಾರವನ್ನು ಸೇವಿಸಿ: ನೀವು ಜಿಮ್‌ಗೆ ಹೋಗದೆ ತೂಕ ಇಳಿಸಿಕೊಳ್ಳಲು ಬಯಸಿದರೆ, ಮೊದಲು ನಿಮ್ಮ ಆಹಾರದಲ್ಲಿ ಬದಲಾವಣೆ ಮಾಡಿ. ನೀವೇ ಅಡುಗೆ ಮಾಡುವ ಮೂಲಕ, ಆಹಾರದಲ್ಲಿ ಎಷ್ಟು ಮಸಾಲೆ ಅಥವಾ ಎಣ್ಣೆ ಇದೆ ಮತ್ತು ನೀವು ಅದನ್ನು ಯಾವ ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಿ.
  6. ತಾಜಾ ಹಣ್ಣು ಹಾಗೂ ತರಕಾರಿಗಳನ್ನು ಸೇವನೆ ಮಾಡಿ : ಅದಷ್ಟು ನಾವು ಹಣ್ಣು ಮತ್ತು ತರಕಾರಿಗಳನ್ನು ಸೇವೆನೆ ಮಾಡಿದ್ದರೆ ಆರೋಗ್ಯ ಉತ್ತಮವಾಗಿರುತ್ತದೆ.
  7. ಜಂಕ್ ಫುಡ್ ಗಳಿಂದ ಅಂತರ ಕಾಯ್ದುಕೊಳ್ಳಿ :  ತೂಕ ಕಡಿಮೆ ಮಾಡಿಕೊಳ್ಳಬೇಕಾದರೆ ಜಂಕ್ ಫುಡ್ ಗಳಿಂದ ದೂರವಿರಬೇಕು.ಆರೋಗ್ಯವಾಗಿರಲು ತಿನ್ನಬೇಕು, ಹೊಟ್ಟೆ ತುಂಬಿಸಿಕೊಳ್ಳಲು ಅಲ್ಲ ಎಂಬುದನ್ನು ನೆನಪಿನಲ್ಲಿಡಿ. ಹೀಗೆ ನಾವು ನಮ್ಮ ಜೇವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ನಮ್ಮ ದೇಹದ ತೂಕ ಕಡಿಮೆಯಾಗುತ್ತದೆ.

 

 

 

Exit mobile version