Site icon PowerTV

ಕೆ.ಆರ್ ಪೇಟೆ ಗೆದ್ದು ಇತಿಹಾಸ ನಿರ್ಮಿಸುತ್ತೇವೆ : ವಿಜಯೇಂದ್ರ ವಿಶ್ವಾಸ

ಬೆಂಗಳೂರು : ಕಳೆದ ಬಾರಿಯಂತೆ ಈ ಬಾರಿಯೂ ಕೆ.ಆರ್ ಪೇಟೆಯನ್ನು ಗೆಲ್ಲುವ ಮೂಲಕ ಬಿಜೆಪಿ ಇತಿಹಾಸ ನಿರ್ಮಿಸಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಿಕಾರಿಪುರು ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾನು ಶಿಕಾರಿಪುರದಲ್ಲಿ ಚುನಾವಣೆಗೆ ನಿಂತಿದ್ದರೂ ಕೆ.ಆರ್ ಪೇಟೆಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಬಿ.ವೈ ವಿಜಯೇಂದ್ರರಿಗೆ ಅದ್ದೂರಿಯಾಗಿ ಸ್ವಾಗತಿಸಿದ ಸಚಿವ ನಾರಾಯಣಗೌಡ, ಹಿಂದಿನಂತೆ ಈ ಬಾರಿಯೂ ಕೆ.ಆರ್ ಪೇಟೆಯಲ್ಲಿ ಗೆಲುವು ಸಾಧಿಸುವುದಾಗಿ ಹೇಳಿದ್ದಾರೆ.

ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ

ಕೆ.ಆರ್.ಪೇಟೆಯಲ್ಲಿಂದು ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿರುವ ಬಿ.ವೈ ವಿಜಯೇಂದ್ರ ಅವರು, ಮಂಡ್ಯ ಜಿಲ್ಲೆ ಅಂದ್ರೆ ಜೆಡಿಎಸ್ ಭದ್ರಕೋಟೆ ಎಂದೇ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದ ಕಾಲದಲ್ಲಿ ಮಂಡ್ಯದಂತಹ ಜಿಲ್ಲೆಯಲ್ಲೂ ಕಮಲ ಅರಳಿಸಬಹುದು ಎಂಬುದನ್ನೂ ಸಾಧಿಸಿ ತೋರಿಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬಿಜೆಪಿ ಕುಟುಂಬ ರಾಜಕಾರಣದ ಪಟ್ಟಿ ಔಟ್ : ಕಮಲ ನಾಯಕರ ‘ವಂಶಪಾರಂಪರ್ಯ’ ನೋಡಿ

ಸಚಿವ ನಾರಾಯಣಗೌಡ ಮಾತನಾಡಿ, ತಾವು ಈ ಹಿಂದೆ ಇದ್ದ ಪಕ್ಷವನ್ನು ಯಾಕೆ ಬಿಡಬೇಕಾಗಿ ಬಂತು ನಂತರ ಆಗಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹೇಗೆ ನನ್ನ ನಡೆಸಿಕೊಂಡರು. ಹಿಂದೆ ನಡೆದ ಉಪ ಚುನಾವಣೆಯಲ್ಲಿ ವಿಜಯೇಂದ್ರ ಅವರು ಕೆ.ಆರ್ ಪೇಟೆಯಲ್ಲೇ ಇದ್ದು ತಮಗೆ ಗೆಲುವು ತಂದು ಕೊಟ್ಟಂತೆ ಈ ಬಾರಿಯೂ ತನ್ನ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಲಿಂಗಾಯಿತರ ಮನಗೆಲ್ಲುವ ತಂತ್ರ

ಇನ್ನೂ, ಬಿ.ವೈ ವಿಜಯೇಂದ್ರ ಅವರನ್ನು ಕೆ.ಆರ್ ಪೇಟೆಗೆ ಕರೆಸಿ ಲಿಂಗಾಯಿತ ಸಮುದಾಯದವರನ್ನೇ ಒಂದೆಡೆ ಸೇರಿಸಿ ಸಭೆ ಆಯೋಜನೆ ಮಾಡುವ ಮೂಲಕ ಕ್ಷೇತ್ರದಲ್ಲಿರುವ ಲಿಂಗಾಯಿತ ಸಮುದಾಯದ ಮನಗೆಲ್ಲಲು ನಾರಾಯಣಗೌಡ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

ಕಳೆದ ಹಲವು ದಿನಗಳಿಂದಲೂ ಸಚಿವ ನಾರಾಯಣಗೌಡ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ಹರಡಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು. ಎಲ್ಲಾ ಗೊಂದಲಗಳ ನಡುವೆ ಕಡೆಗೂ ಬಿಜೆಪಿಯಿಂದಲೇ ಸ್ಪರ್ಧೆ ಮಾಡ್ತಿರುವ ನಾರಾಯಣಗೌಡ ಈಗ ಕ್ಷೇತ್ರಾದ್ಯಂತ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.

Exit mobile version