Site icon PowerTV

ಇಂದೇ ಕಾಂಗ್ರೆಸ್‌ ಸೇರ್ತಾರಾ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ..?

ಬೆಂಗಳೂರು : ಬೆಳಗಾವಿಯ ಅಥಣಿ BJP ಟಿಕೆಟ್‌ ಸಿಗದಿದ್ದಕ್ಕೆ ಸಿಡಿದೆದ್ದಿರುವ ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ, ಇಂದು ಬಿಜೆಪಿಗೆ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ.. ಈಗಾಗಲೇ ಬೆಂಗಳೂರು ತಲುಪಿರುವ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಿಸೈನ್‌ ಮಾಡಲಿದ್ದಾರೆ.. BJPಗೆ ಗುಡ್​​ ಬೈ ಹೇಳಿದ ಬಳಿಕ ಸವದಿ JDS ಅಥವಾ ಕಾಂಗ್ರೆಸ್​ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

ಇಂದು ಲಕ್ಷ್ಮಣ್ ಸವದಿ ಡಿಕೆಶಿ ಹಾಗೂ ರಣದೀಪ್‌ ಸುರ್ಜೇವಾಲನ್ನ ಭೇಟಿ ಬಳಿಕ ಸಿದ್ದರಾಮಯ್ಯ ಭೇಟಿ ಮಾಡಿರುವ ಸವದಿ ಮುಂದಿನ ರಾಜಕೀಯ ನಡೆ ಬಗ್ಗೆ  ಚರ್ಚೆ ಮಾಡಲಿದ್ದಾರೆ.

ರಾಜ್ವ ವಿಧಾನ ಪರಿಷತ್​ನಲ್ಲಿ ಬಿಜೆಪಿ ಸಂಖ್ಯಾಬಲ ಕುಸಿತ

ರಾಜ್ವ ವಿಧಾನ ಪರಿಷತ್​ನಲ್ಲಿ ಬಿಜೆಪಿ ಸಂಖ್ಯಾಬಲ ಕುಸಿತ ಕಂಡಿದೆ. ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ R. ಶಂಕರ್, ಬಾಬುರಾವ್ ಚಿಂಚನಸೂರ್, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ರಾಜೀನಾಮೆ ನೀಡಲಿದ್ದಾರೆ. ವಿಧಾನಪರಿಷತ್ ಬಿಜೆಪಿ ಸದಸ್ಯ H. ವಿಶ್ವನಾಥ್ ರಾಜೀನಾಮೆ‌ ನೀಡುವ ಸಾಧ್ಯತೆಯಿದ್ದು, ಜೊತೆಗೆ BJP ಮುಖಂಡ ಆಯನೂರು ಮಂಜುನಾಥ್ ರಾಜೀನಾಮೆ‌ ನೀಡಿದರೆ ಪರಿಷತ್​​ನಲ್ಲಿ ಬಿಜೆಪಿಗೆ ದೊಡ್ಡ ಸಂಕಷ್ಟ ಎದುರಾಗಲಿದೆ. ಪ್ರಸ್ತುತ ಬಿಜೆಪಿಯ ಪುಟ್ಟಣ್ಣ, ಬಾಬುರಾವ್ ಚಿಂಚನಸೂರ್, ಆರ್.ಶಂಕರ್ ರಾಜೀನಾಮೆ ಕೊಟ್ಟ ನಂತರ ವಿಧಾನ ಪರಿಷತ್ ಸದಸ್ಯ ಸ್ಥಾನ 37ಕ್ಕೆ ಕುಸಿದಿದೆ. ಕಾಂಗ್ರೆಸ್ 26, ಜೆಡಿಎಸ್ 8, ಖಾಲಿ 2, ಪಕ್ಷೇತರ 1, ಸಭಾಪತಿ 1 ಸೇರಿದಂತೆ 75 ಸ್ಥಾನಗಳ ಪೈಕಿ 37ಕ್ಕೆ ಕುಸಿತ ಕಂಡಿದೆ. ಇನ್ನು ಇಬ್ಬರು ಅಥವಾ ಮೂವರು, ಶಾಸಕ ಸ್ಥಾನಕ್ಕೆ‌ ರಾಜೀನಾಮೆ ನೀಡಿದರೆ ಬಿಜೆಪಿಗೆ ಬಹುಮತ ಕೊರತೆಯಾಗಲಿದ್ದು, BJPಗೆ ಸಂಕಷ್ಟ ಎದುರಾಗಲಿದೆ.

Exit mobile version