Site icon PowerTV

Laxman Savadi : ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇಂದು ಸಂಜೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಬೆಂಗಳೂರು : ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆ ಅಸಮಾಧಾನ ಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇಂದು ಸಂಜೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ಹೌದು, ಬಿಜೆಪಿಯಲ್ಲಿ ಲಕ್ಷ್ಮಣ ಸವದಿಗೆ ಟಿಕೆಟ್ ತಪ್ಪಿಸಿ ಮಹೇಶ ಕುಮಠಳ್ಳಿಗೆ ಟಿಕೆಟ್ ಕೊಡುಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ರಮೇಶ ಜಾರಕಿಹೋಳಿ ವಿರುದ್ಧ ಲಕ್ಷ್ಮಣ ಸವದಿ ಕೆಂಡಾಮಂಡಲವಾಗಿದ್ದಾರೆ. ಬಿಜೆಪಿ ವಿರುದ್ಧ ಲಕ್ಷ್ಮಣ ಸವದಿ ಸಿಡಿಗುಂಡು ಹಾರಿಸಿದ್ದಾರೆ. ‘ನಾನು ಡಿಸಿಎಂ ಹುದ್ದೆಯನ್ನು ಕೇಳಿರಲಿಲ್ಲ’ – ‘ಡಿಸಿಎಂ ಹುದ್ದೆ ಕೊಟ್ಟು, ತೆಗೆದಿದ್ದು ಯಾಕೆ’ – ಡಿಸಿಎಂ ಹುದ್ದೆ ನೀಡಿ ತೆಗೆದಿದ್ದು ಅವಮಾನ ಅಲ್ಲವೇ? – ಏನಾದರೂ ಭ್ರಷ್ಟಾಚಾರ ಮಾಡಿದ್ನಾ? ಅದಕ್ಕೆ ತೆಗೆದ್ರಾ? – ಕೇಸರಿ ಪಡೆ ವಿರುದ್ಧ  ಸವದಿ ಕಿಡಿಕಾರಿದ್ದಾರೆ.

Exit mobile version