Site icon PowerTV

ಸಿದ್ರಾಮಯ್ಯ ಅವ್ರೇ ಸುಳ್ಳು ಹೇಳೋಕೆ ನಾಚಿಕೆ ಇಲ್ಲವೆ? : ಜೆಡಿಎಸ್ ಟಾಂಗ್

ಬೆಂಗಳೂರು : ಬಿಜೆಪಿ ಟಿಕೆಟ್ ಮಿಸ್ ಆಗಿರುವ ಕಾರಣ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದೆ.

ಲಕ್ಷ್ಮಣ ಸವದಿಯವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ಕಾಂಗ್ರೆಸ್ ನ ಎಲ್ಲ 79 ಶಾಸಕರಿಂದ ಮತದಾನ ಬಹಿಷ್ಕಾರ ಮಾಡಿಸಿದ್ದು ಸಿದ್ದರಾಮಯ್ಯನವರು ಎಂದು ಖಚಿತ ಮೂಲದಿಂದಲೇ ಹೊರಬಂತಲ್ಲ ಎಂದು ಕುಟುಕಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಇದಕ್ಕೇನು ಉತ್ತರ ನೀಡುತ್ತೀರಿ, ಮಾಜಿ ಮುಖ್ಯಮಂತ್ರಿಗಳೇ? ನಿಮ್ಮ ಅಣತಿಯಂತೆ ಸುಳ್ಳು ಹೇಳುವ ಬೆಂಬಲಿಗರು ಈಗ ಎಲ್ಲಿ ಹೋದರು? ಎಂದು ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ : ಬಿಜೆಪಿ, ಜೆಡಿಎಸ್ ಎಲ್ಲರಿಗೂ ನಾನೇ ಟಾರ್ಗೆಟ್ : ಸಿದ್ದರಾಮಯ್ಯ

ಸಿದ್ದರಾಮಯ್ಯ ಹಸಿಸುಳ್ಳು

ಬಿಜೆಪಿಯ ಬಿ ಟೀಮ್ ಎಂದು ಜೆಡಿಎಸ್ ಪಕ್ಷದ ಬಗ್ಗೆ ಹಸಿಸುಳ್ಳು ಹೇಳುತ್ತಾ, ಜನರನ್ನು ದಾರಿ ತಪ್ಪಿಸುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ನವರೆ, ನಿಮ್ಮ ಆಟಗಳು ಗೊತ್ತಿರುವಂತದ್ದೆ. ಈಗ ನಿಮ್ಮ ಪಕ್ಷಕ್ಕೆ ಸೇರಲು ನಿರ್ಧರಿಸಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi)ಯವರೆ, ನೀವು ಸೇರಿದಂತೆ ನಿಮ್ಮ ಪಕ್ಷದ ಶಾಸಕರು ಅವರ ಗೆಲುವಿಗೆ ನೆರವಾದ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ ಎಂದು ಹೇಳಿದೆ.

ನಿಮಗೆ ನಾಚಿಕೆ ಇಲ್ಲವೆ?

ಲಾಭಕ್ಕಾಗಿ ಬಿಜೆಪಿಯ ಜತೆ ಒಳನಂಟು ಇಟ್ಟುಕೊಂಡು, ಜನರ ಮುಂದೆ ಸುಳ್ಳು ಹೇಳುತ್ತೀರಲ್ಲ. ನಿಮಗೆ ನಾಚಿಕೆ ಇಲ್ಲವೆ? ಒಂದೀಡಿ ಸಮುದಾಯವನ್ನು ಹೀಗೆ ಹೆದರಿಸಿ ಅವರಿಂದ ಮತ ಪಡೆದು ಕಳ್ಳಾಟ ಮುಂದುವರಿಸುವುದು ನಿಮ್ಮ ಲಾಗಾಯ್ತಿನ ಚಾಳಿ. ಆತ್ಮಸಾಕ್ಷಿ, ಸ್ವಾಭಿಮಾನ, ಪ್ರಾಮಾಣಿಕತೆ ಇಲ್ಲದವರ ನಡೆ. ಜನರೇ ನಿಮಗೆ ಬುದ್ಧಿ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.

Exit mobile version