Site icon PowerTV

ವರಿಷ್ಠರ ಧೂತನಾಗಿ ಕನಕಪುರಕ್ಕೆ ಕಾಲಿಡ್ತೀನಿ ; ಆರ್. ಅಶೋಕ್

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಕಣಕ್ಕೆ ಸಜ್ಜಾಗಿದ್ದರೆ. ಕನಕಪುರದಲ್ಲಿ ಬಿಜೆಪಿ ಹೈಅಲರ್ಟ್ ಆಗಿದ್ದು, ಎದುರಾಳಿಗಳಿಗೆ ನಡುಕ ಹುಟ್ಟಿದೆ.

ಕನಕಪುರದಲ್ಲಿ ಸ್ಪರ್ಧಿಸುತ್ತಿರುವ ಆರ್​ ಅಶೋಕ್ ಪವರ್ ಟಿವಿಯ ಜೊತೆಯಲ್ಲಿ ಮಾತನಾಡಿ ಕಂದಾಯ ಸಚಿವ ಆರ್​ ಅಶೋಕ್ ಪದ್ಮನಾಭನಗರ ಮತ್ತು‌ ಕನಕಪುರ ಎರಡನ್ನೂ ಗೆಲ್ಲೋದು ನಮ್ಮ ಗುರಿ . ಪಕ್ಷದ ವರಿಷ್ಟರ ಆದೇಶ ಪಾಲನೆ ಮಾಡೋದು ನನ್ನ ಕರ್ತವ್ಯ. ಅದನ್ನು ಪಾಲನೆ ಮಾಡುತ್ತೇನೆ ಎಂದಿದ್ದಾರೆ.

ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಆರ್​ ಅಶೋಕ್  ಡಿ.ಕೆ.ಶಿವಕುಮಾರ್ ಹೇಳಿದಂತೆ ನಾನು ಮಾಂಸ ತಿನ್ನೋದಕ್ಕೆ ಕನಕಪುರಕ್ಕೆ ಹೋಗಬೇಕಾಗಿಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ಸದಾ ಮಾಂಸದ್ದೆ ಚಿಂತೆ.ಆದರೆ ನಾನು ಚುನಾವಣೆ ಸಂದರ್ಭದಲ್ಲಿ ಮಾಂಸ ತಿನ್ಮೋದೇ ಇಲ್ಲ. ಸಂಪೂರ್ಣ ಸಸ್ಯಾಹಾರಿ.ಹೌದು ನಾನು ಒಕ್ಕಲಿಗ.ಹುಟ್ಟಿನಿಂದ ಒಕ್ಕಲಿಗನಾದರೂ ಎಲ್ಲ ಜನಾಂಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ.ಈಗ ನನ್ನ‌ಪರವಾಗಿ ಪ್ರಚಾರಕ್ಕೆ ಸ್ವತಹ ಇತರ ಷಾ ಬರುತ್ತಿದ್ದಾರೆ.ಚುನಾವಣಾ ಫಲಿತಾಂಶ ಪ್ರಕಟವಾಗಿ ಬಿಜೆಪಿ ಸರ್ಕಾರ ರಚನೆ ಮಾಡುವವರೆಗೆ ಅವರು ರಾಜ್ಯದಲ್ಲೇ ವಾಸ್ತವ್ಯ ಮಾಡುತ್ತಾರೆ.ಈ ಬಾರಿ ಚುನಾವಣೆಯನ್ನು ಬಿಜೆಪಿ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ.ಬಿಜೆಪಿ ವರಿಷ್ಟರು ನನ್ನ ಮೇಲೆ ನಂಬಿಕೆ ಇಟ್ಟು ಕನಕಪುರದ ಟಾಸ್ಕ್ ಕೊಟ್ಟಿದ್ದಾರೆ.ಅದನ್ನು ನಿಭಾಯಿಸಿ ತೋರಿಸುತ್ತೇನೆ. ಎಂದು ತೀರುಗೇಟು ನೀಡಿದ್ದಾರೆ.

Exit mobile version