Site icon PowerTV

‘ನನಗೆ ಟಿಕೆಟ್ ಸಿಗುತ್ತೆ ಕಾದು ನೋಡಿ’ : ಜಗದೀಶ್ ಶೆಟ್ಟರ್ ವಿಶ್ವಾಸ

ಹುಬ್ಬಳ್ಳಿ : ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾದ ಬಳಿಕ ಹುಬ್ಬಳ್ಳಿಗೆ ಮರಳಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮೊದಲ ಪ್ರತಿಕ್ರಿಯೆ ನೀಡಿದ್ದು, ನನಗೆ ಟಿಕೆಟ್ ಸಿಗುತ್ತೆ ಕಾದು ನೋಡಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿ, ನಾನು ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಹೇಳಿಲ್ಲ. ನನ್ನ ಮಗನ ಹೆಸರು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಜೊತೆ ಸುದೀರ್ಘ ಮೀಟಿಂಗ್ ಆಗಿದೆ. ನಡ್ಡಾ ಜೊತೆ ಮಾತ್ರ ಮೀಟಿಂಗ್ ಆಗಿದ್ದು, ಒಪನ್ ಆಗಿ‌ ಎಲ್ಲವನ್ನೂ ಹೇಳಿದ್ದೇನೆ. ಎರಡು ದಿನ ಕಾದು ನೋಡಿ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಶಾ, ನಡ್ಡಾ ಜೊತೆ ಬಿಎಸ್ ವೈ ಚರ್ಚೆ

ದೆಹಲಿಯಿಂದ ಬಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇನೆ. ಯಡಿಯೂರಪ್ಪ ಕೂಡಾ ಜಗದೀಶ್ ಶೆಟ್ಟರ್ ಗೆ ಟಿಕೆಟ್ ‌ಕೊಡಬೇಕು ಎಂದಿದ್ದಾರೆ. ಯಡಿಯೂರಪ್ಪ ‌ಅಮಿತ್ ಶಾ, ನಡ್ಡಾ ಜೊತೆ ಮಾತಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಎಲ್ರೂ ‘ಶಿವಕುಮಾರೂ ಸಾಕು, ಕಾಂಗ್ರೆಸ್ಸೂ ಸಾಕು’ ಅಂತಿದ್ದಾರೆ : ಅಶ್ವತ್ಥನಾರಾಯಣ ಟಾಂಗ್

.ಕರ್ನಾಟಕದ ಮೇಲೆ ಪ್ರಭಾವ ಬೀರುತ್ತೆ

ಜಗದೀಶ್ ಶೆಟ್ಟರ್ ಗೆ ಟಿಕೆಟ್ ಸಿಗದೆ ಹೋದರೆ, ಉತ್ತರ ಕರ್ನಾಟಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ ಅನ್ನೋದನ್ನು ಯಡಿಯೂರಪ್ಪ ವರಿಷ್ಠರ ಗಮನಕ್ಕೆ ತಂದಿದ್ದಾರೆ. ಇದು ಕೇವಲ ಜಗದೀಶ್ ಶೆಟ್ಟರ್ ಪ್ರಶ್ನೆ ಅಲ್ಲ. ಉತ್ತರ ಕರ್ನಾಟಕದಲ್ಲಿನ ಕ್ಷೇತ್ರಗಳ ಅಭ್ಯರ್ಥಿಗಳ ಪ್ರಶ್ನೆ ಎಂದು ತಿಳಿಸಿದ್ದಾರೆ.

ತಮಗೆ ಟಿಕೆಟ್ ತಪ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯತ್ನ ಮಾಡ್ತೀದಾರಾ? ಎಂಬ ಸುದ್ದಿಗಾರರ ಪ್ರಶ್ನೆಗೆ, ನಾನು ಯಾರ ಬಗ್ಗೆನೂ ಕಾಮೆಂಟ್‌ ಮಾಡಲ್ಲ ಎಂದಿದ್ದಾರೆ. ಎರಡನೇ ಪಟ್ಟಿಯಲ್ಲಿ ಹೆಸರು ಘೋಷಣೆಯಾಗದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನಿನ್ನೆ ಸಂಜೆಯವರೆಗೂ ಮೀಟಿಂಗ್ ಇತ್ತು. ಅದು ಸಹಜ ಅದರಲ್ಲಿ ವಿಶೇಷ ಇಲ್ಲ. ನನಗೆ ಟಿಕೆಟ್ ಸಿಗುತ್ತೆ ನೋಡಿ ನೀವು ಎಂದು ಶೆಟ್ಟರ್ ಪುನರುಚ್ಚರಿಸಿದ್ದಾರೆ.

Exit mobile version