Site icon PowerTV

Karnataka Election 2023: ತುಮಕೂರಿನ ಮಾಜಿ ಸಚಿವ ಸೊಗಡು ಶಿವಣ್ಣ ಬಿಜೆಪಿಗೆ ಗುಡ್​ ಬೈ

ತುಮಕೂರು : ರಾಜ್ಯ ವಿಧಾನ ಸಭಾ ಚುನಾವಣೆಗೆ (Karnataka Elections 2023) ಕೆಲವೇ ದಿನಗಳು ಬಾಕಿ ಉಳಿದಿದೆ ಅಂದ್ರೆ ರಾಷ್ಟ್ರೀಯ ಪಕ್ಷಗಳು ಈಗಲೇ ಕೆಲವು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಳಿಕೆ ಟಿಕೆಟ್ ಸಿಗದ ಕೆಲವು ಅಭ್ಯರ್ಥಿಗಳಿಂದ ರಾಜಕೀಯ ಪಕ್ಷಗಳಲ್ಲಿ ಬಂಡಾಯದ ಕಾವು ಜೋರಾಗಿದೆ.

ಇದನ್ನೂ ಓದಿ : ಟಿಕೆಟ್ ಕೈತಪ್ಪಿದ್ದಕ್ಕೆ ‘ಬಿಕ್ಕಿಬಿಕ್ಕಿ ಅತ್ತ’ ಶಾಸಕ ರಘುಪತಿ ಭಟ್

ಹೌದು, ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Elections 2023) ಬಿಜೆಪಿ (BJP)ತನ್ನ  ಮೊದಲ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಹಿರಿಯ ನಾಯಕರು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತಿದ್ದರೆ ಟಿಕೆಟ್​ ವಂಚಿತ ಇನ್ನೂ ಕೆಲವರು ಪಕ್ಷಕ್ಕೆ ಗುಡ್​ ಬೈ  ಹೇಳ್ತಿದ್ದಾರೆ. ಇದೀಗ ತುಮಕೂರು (Tumakuru) ಜಿಲ್ಲೆಯ ಪ್ರಭಾವಿ ಮುಖಂಡ ಸೊಗಡು ಶಿವಣ್ಣ (Sogadu Shivanna) ರಾಜೀನಾಮೆ ಘೋಷಣೆ ಮಾಡಿದ್ದಾರೆ.

ಬೆಂಬಲಿಗರ ಜೊತೆ ಸಭೆ ಕರೆದು ಬಳಿಕ ಮಾತನಾಡಿದ ಸೊಗಡು ಶಿವಣ್ಣ, ನಾನು ಈ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಸ್ಪರ್ಧೆ ಮಾಡುವುದು ಖಚಿತ. ನನ್ನ ಮನೆಯಲ್ಲಿ ಬಿಜೆಪಿಗೆ ಸೇರಿದ ಬಾವುಟಗಳಿವೆ,ಅದಕ್ಕೆ ನಾನು ಗೌರವ ನೀಡಬೇಕು. ಅದನ್ನು ಒಂದು ಕಡೆಗೆ ಶಿಫ್ಟ್​ ಮಾಡಿದ ಬಳಿಕ ನಾನು ಅಧಿಕೃತವಾಗಿ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.

 

Exit mobile version