ಪುರುಸೊತ್ತೇ ಇಲ್ಲದ ಈ ಆಧುನಿಕ ಜಗತ್ತಿನಲ್ಲಿ ನಮ್ಮ ದಿನದ ಆರಂಭ ಸರಿಯಾಗಿ ಇಲ್ಲದೆ ಇದ್ದರೆ ಆಗ ಖಂಡಿತವಾಗಿಯೂ ಆ ದಿನವು ನಮ್ಮಗೆ ಉತ್ತಮವಾಗಿರುವುದಿಲ್ಲ. ಆಗ ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಹಾಗಾಗಿ ನಾವು ನಮ್ಮ ದಿನನಿತ್ಯದ ಜೀವನ ಶೈಲಿಯಲ್ಲಿ ಕೆಲವೊಂದು ಆರೋಗ್ಯಕಾರಿ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು.
ಹೌದು,ನಮ್ಮ ಪೂರ್ವಜರ ಕಾಲದಲ್ಲಿ, ಎದ್ದ ಬಳಿಕ ಹಿರಿಯರು ಮನೆಯಲ್ಲಿರುವ ದೇವರ ಫೋಟೊಗಳಿಗೆ ನಮಸ್ಕರಿಸುತ್ತಿದ್ದರು ಹಾಗೂ ಮನೆಯ ಅಂಗಳದಲ್ಲಿರುವ ಇರುವಂತಹ ತುಳಸಿ ಕಟ್ಟೆಗೆ ಕೂಡ ಸುತ್ತು ಬರುತ್ತಿದ್ದರು.. ಯೋಗ, ವ್ಯಾಯಾಮ ಇತ್ಯಾದಿಗಳನ್ನು ಮಾಡುವರು, ಅದ್ರೆ ಈಗಿನ ಕಾಲದಲ್ಲಿ ಮೊಬೈಲ್ ಇಲ್ಲದೇ ಅವರಿಗೆ ಬೆಳಗ್ಗೆಯಾಗುವುದೇ ಇಲ್ಲ ಎದ್ದ ಕೂಡಲೇ ಅವರು ಮೊಬೈಲ್ ನೋಡುವುದನ್ನೇ ಅಭ್ಯಾಸವನ್ನಾಗಿಸಿಕೊಂಡಿರುವರು ವಿಪರ್ಯಾಸವಾಗಿದೆ. ಇಂದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ.
ನಾವು ದಿನನಿತ್ಯದ ಜೀವನ ಕ್ರಮದಲ್ಲಿ ಅಭ್ಯಾಸಗಳನ್ನು ಈ ಅಭ್ಯಾಸಗಳನ್ನು ಮೈಗೂಡಿಸಿಕೊಂಡರೆ ನಿಮ್ಮ ಆರೋಗ್ಯದಲ್ಲಿ ಕೆಲವು ಬದಲಾವಣೆ ಕಾಣಬಹುದು.
ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ
ನಮ್ಮ ದೇಹದಲ್ಲಿ ಶೇ.70ರಷ್ಟು ನೀರಿನಾಂಶವಿರುವ ಕಾರಣದಿಂದಾಗಿ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಉತ್ತಮವಾಗಿರಲು ನೀರು ಸಹಕಾರಿಯಾಗುತ್ತದೆ. ನಾವು ದಿನಾಲೂ ಎದ್ದ ಕೂಡಲೇ ಒಂದು ದೊಡ್ಡ ಲೋಟ ನೀರು ಕುಡಿದರೆ ಅದರಿಂದ ದೇಹದಲ್ಲಿ ಇರುವ ವಿಷಕಾರಿ ಅಂಶವು ಹೊರಗೆ ಹೋಗಿ ಜೀರ್ಣಕ್ರಿಯೆ ವ್ಯವಸ್ಥೆಯು ಸುಗಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದು.
ದಿನಾ ಎದ್ದ ಕೂಡಲೇ ಯೋಗ ಮಾಡಿ
ಯೋಗ ಮಾಡಿದ್ದರೆ ನಮ್ಮ ಮನಸ್ಸು ಹಾಗೂ ಆರೋಗ್ಯ ಎರಡು ಚನ್ನಾಗಿರುತ್ತದೆ. ನಮ್ಮ ಇಡೀ ದಿನ ಯಾವುದೇ ಒತ್ತಡ ಬಂದರೂ ಸಹ ಅದನ್ನು ಸುಲಭವಾಗಿ ನಾವು ನಿರ್ವಹಣೆ ಮಾಡಲು ಯೋಗ ನಮ್ಮಗೆ ಸಹಾಯಕ.
ಬೆಳಿಗ್ಗೆ ಎದ್ದು ಕೊಡಲೇ ನೆನೆಸಿಟ್ಟ ಬಾದಾಮಿ ಸೇವಿಸಿ
ರಾತ್ರಿಯಿಡೀ ನೆನೆಸಿಟ್ಟ ಬಾದಾಮಿಯನ್ನು ಬೆಳಿಗ್ಗೆ ಎದ್ದು ಕೊಡಲೇ ಸೇವಿಸಿ. ದಿನಾ ಸೇವಿಸುತ್ತಾ ಬರುವುದರಿಂದ ನಮ್ಮ ಆರೋಗ್ಯದಲ್ಲಿ ಬದಲಾವಣೆ ಕಾಣಬಹುದು.
ಬ್ರೇಕ್ ಫಾಸ್ಟ್ ಮಿಸ್ ಮಾಡಲೇ ಬಾರದು
ಹೀಗೆ ನಾವು ನಮ್ಮ ದಿನನಿತ್ಯದ ಬದುಕಿನಲ್ಲಿ ಬದಲಾವಣೆ ಮಾಡಿಕೊಂಡರೆ ನಮ್ಮ ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆ ಕಾಣಬಹುದು.