Site icon PowerTV

ಎಲ್ರೂ ‘ಶಿವಕುಮಾರೂ ಸಾಕು, ಕಾಂಗ್ರೆಸ್ಸೂ ಸಾಕು’ ಅಂತಿದ್ದಾರೆ : ಅಶ್ವತ್ಥನಾರಾಯಣ ಟಾಂಗ್

ರಾಮನಗರ : ಸಚಿವ ಆರ್. ಅಶೋಕ್ ಕನಕಪುರ ಸ್ಪರ್ಧೆ ಬಗ್ಗೆ ಲೇವಡಿ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಟಾಂಗ್ ಕೊಟ್ಟಿದ್ದಾರೆ.

ಕನಕಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆರ್.ಅಶೋಕ್ ಸ್ಪರ್ಧೆ ವಿಚಾರವಾಗಿ ಮಾಗಡಿಯಲ್ಲ ಮಾತನಾಡಿರುವ ಅವರು, ಆರ್.ಅಶೋಕ್ ನಮ್ಮ ಪಕ್ಷದ ಹಿರಿಯ ನಾಯಕರು. ಅವರನ್ನು ಕನಕಪುರದಿಂದ ಕಣಕ್ಕೆ ಇಳಿಸುವ ಕೆಲಸ ಆಗಿದೆ ಎಂದು ಹೇಳಿದ್ದಾರೆ.

ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ವಿರುದ್ಧದ ಅಲೆ ಇದೆ. ಜನರಿಗೆ ಸಂಪೂರ್ಣ ಅತೃಪ್ತಿ ಇದೆ. ಹಾಗಾಗಿ ಅಲ್ಲಿ ಬಿಜೆಪಿ ಗೆಲ್ಲುವ ಸಂಪೂರ್ಣ ವಿಶ್ವಾಸ ಇದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಇದನ್ನೂ ಓದಿ : ‘ಜೀವ ಇರೋವರೆಗೂ ಕಾಂಗ್ರೆಸ್’ಗೆ ಹೋಗಲ್ಲ : ಸೊಗಡು ಶಿವಣ್ಣ

ಜನ ಬಿಜೆಪಿ ಬೇಕು ಅಂತಿದ್ದಾರೆ

ನಾವು ಎಲ್ಲಾ ಕಡೆಯಲ್ಲೂ ಚುನಾವಣೆ ಮಾಡ್ತೀವಿ. ಪಕ್ಷ ಸಂಘಟನೆ ಮಾಡಿ ಗೆಲುವು ಸಾಧಿಸುತ್ತೇವೆ. ಎಲ್ಲರೂ ಡಿ.ಕೆ.ಶಿವಕುಮಾರ್ ಸಾಕಪ್ಪ ಸಾಕು ಅಂತಿದ್ದಾರೆ. ಕಾಂಗ್ರೆಸ್ಸೂ ಸಾಕು, ಶಿವಕುಮಾರೂ ಸಾಕು, ಬಿಜೆಪಿ ಬೇಕು ಅಂತಿದ್ದಾರೆ. ವಿರೋಧ ಪಕ್ಷದವರು ಏನೇ ಹೇಳಿದ್ರೂ ತಲೆಕೆಡಿಸಿಕೊಳ್ಳಲ್ಲ‌ ಎಂದು ಹೇಳಿದ್ದಾರೆ.

ಕನಕಪುರದಲ್ಲಿ ಒಳ್ಳೆಯ ಆತಿಥ್ಯ ಸಿಗುತ್ತೆ

ಇನ್ನೂ ಅಶೋಕ್ ಸ್ಪರ್ಧೆ ಕುರಿತು ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ‘ಸಾಮ್ರಾಟ್ ಆದ್ರೂ ಬರಲಿ, ಚಕ್ರವರ್ತಿ ಆದ್ರೂ ಬರಲಿ. ಕನಕಪುರದಲ್ಲಿ ಒಳ್ಳೆಯ ಆತಿಥ್ಯ ಸಿಗುತ್ತೆ’ ಎಂದು ಲೇವಡಿ ಮಾಡಿದ್ದರು. ಕನಕಪುರದಲ್ಲಿ  ತುಂಬಾ ಮಿಲ್ಟ್ರಿ ಹೋಟೆಲ್ ಗಳಿವೆ. ಅಶೋಕ್ ಅವರು ಬಂದು ಚೆನ್ನಾಗಿ ಟೈಮ್ ಪಾಸ್ ಮಾಡಿಕೊಂಡು ಹೋಗಲಿ. ನಾನು ನಾಮಿನೇಶನ್ ಹಾಕೋಕೆ ಹೋಗ್ತೀನಿ. ಮತ ಕೇಳೋಕೆ ಇನ್ನೊಂದು ಸಲ ಹೋಗ್ತೀನಿ ಅಷ್ಟೇ ಎಂದು ಹೇಳಿದ್ದರು.

Exit mobile version