Site icon PowerTV

ಮಹಾ ಎಡವಟ್ಟು : ಕಾಂಗ್ರೆಸ್ ಅಭ್ಯರ್ಥಿ ವಿವಾದಾತ್ಮಕ ಹೇಳಿಕೆ

ಮೈಸೂರು : ರಾಜ್ಯ ವಿಧಾನಸಭಾ ಚುನಾವಣೆ ಹೊತ್ತಿನಲ್ಲೇ ಕಾಂಗ್ರೆಸ್ ಅಭ್ಯರ್ಥಿ ವಿವಾದಾತ್ಮಕ ಹೇಳಿಕೆ ಹರಿಬಿಟ್ಟು, ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ.

ಓಟ್ ಕೇಳೋ ವೇಳೆ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ಬಂಡಿಸಿದ್ದೇಗೌಡ (ramesh babu bandisiddegowda)

ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ. ಅಧಿಕಾರ ಬೇಕು ಪಕ್ಷದ ಚಿನ್ಹೆ ಬೇಡ್ವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಖತ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಗೆ ಮತ್ತೊಂದು ಶಾಕ್ : ಬಿಜೆಪಿಗೆ ಸೇರ್ಪಡೆಯಾದ ಡಿಕೆಶಿ ಆಪ್ತ

ಕಾಂಗ್ರೆಸ್ ಪಕ್ಷಕ್ಕೆ ಓಟ್ ಹಾಕೋಕೆ ಇಷ್ಟ ಇಲ್ಲ ಅಂದ್ರೆ ಕೈಯಲ್ಲಿ ಚಿನ್ಹೆ ಮುಚ್ಚಿ ಓಟ್ ಹಾಕಿ ಎಂದು ರಮೇಶ್ ಹೇಳಿದ್ದಾರೆ ಎನ್ನಲಾಗಿದೆ. ನೀವು ಚಿನ್ಹೆಗೆ ಓಟ್ ಹಾಕ್ಬೇಡಿ, ಬಾಬಣ್ಣನಿಗೆ ಅಂತಾ ಓಟ್ ಹಾಕಿ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಇದರಿಂದ ಕೈ ಕಾರ್ಯಕರ್ತರು ಕೆರಳಿ ಕೆಂಡವಾಗಿದ್ದಾರೆ.

ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಶ್ರೀರಂಗಪಟ್ಟಣ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು ಪ್ರಚಾರದ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಮಾತಿನ ಭರದಲ್ಲಿ ತಾನು ಆಡಿದ ಮಾತಿಗೆ ಬೆಲೆ ತೆತ್ತಿದ್ದಾರೆ. ರಮೇಶ್ ಹೇಳಿಕೆಗೆ ಕೈ ಕಾರ್ಯಕರ್ತರು ಲೆಫ್ಟ್ ರೈಟ್ ತೆಗೆದುಕೊಂಡಿದ್ದಾರೆ.

Exit mobile version