Site icon PowerTV

ದೇವೇಗೌಡರಿಗೂ ರೇವಣ್ಣ ಮನವೊಲಿಸುವ ಶಕ್ತಿ ಇಲ್ಲ : ಎಚ್.ಡಿ ಕುಮಾರಸ್ವಾಮಿ

ಬಳ್ಳಾರಿ : ಹಾಸನ ಜೆಡಿಎಸ್ ಅಭ್ಯರ್ಥಿ ಆಯ್ಕೆ ಗೊಂದಲ ಮುಂದುವರಿದಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD  kumaraswamy) ಪ್ರತಿಕ್ರಿಯಿಸಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಅವರು, ಟಿಕೆಟ್ ವಿಚಾರದ ಕುರಿತು ಚರ್ಚಿಸಲು ಮಾಜಿ ಸಚಿವ ಎಚ್.ಡಿ ರೇವಣ್ಣ ಅವರು ಈವರೆಗೂ ನನ್ನ ಬಳಿ ಬಂದಿಲ್ಲ. ರೇವಣ್ಣ ಅವರ ಮನವೊಲಿಸುವ ಶಕ್ತಿ ದೇವೇಗೌಡರಿಗೂ ಇಲ್ಲ. ಅದೇ ನಮ್ಮ ದುರಾದೃಷ್ಟ ಎಂದು ಎಚ್‌.ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :  ಹಾಸನದಲ್ಲಿ ‘ಮನೆ ಹಾಳು ಮಾಡುವ ಶಕುನಿಗಳು’ ಇದ್ದಾರೆ : ಕುಮಾರಸ್ವಾಮಿ ಕಿಡಿ

ಹಾಸನದಲ್ಲಿ ಕೆಲವು ಮನೆ ಹಾಳು ಮಾಡುವ ಶಕುನಿಗಳಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಅವರು ರೇವಣ್ಣನವರ ಬ್ರೈನ್ ವಾಶ್ ಮಾಡುತ್ತಿದ್ದಾರೆ. ಹೀಗಾಗಿ ಇನ್ನೂ ಟಿಕೆಟ್ ಸಮಸ್ಯೆ ಕಗ್ಗಂಟಾಗಿದೆ ಎಂದು ಆರೋಪಿಸಿದ್ದಾರೆ.

ಹಿತಶತ್ರುಗಳು ಹಾಗೂ ಶಕುನಿಗಳಿಂದ ಟಿಕೆಟ್ ಹಂಚಿಕೆ ವಿಳಂಬವಾಗುತ್ತಿರುವುದು ಸತ್ಯ. ಎರಡನೇ ಪಟ್ಟಿಯಲ್ಲಿ ಹಾಸನ ಕ್ಷೇತ್ರವನ್ನು ಸೇರಿಸಿಲ್ಲ. ಅದು ಇನ್ನೂ ಫೈನಲ್ ಆಗಿಲ್ಲ ಎಂದು ಹೇಳಿದ್ದಾರೆ.

ಹಾಸನದ ಗೊಂದಲ ಬೇರೆಯೇ ಆಗಿದೆ. ಆ ಕ್ಷೇತ್ರದ ಟಿಕೆಟ್ ಕಾರ್ಯಕರ್ತರ ಭಾವನೆಯಲ್ಲಿ ತೀರ್ಮಾನ ಆಗಬೇಕು ಎಂಬುದು ನನ್ನ ನಿಲುವಾಗಿದೆ. ಹಾಗಾಗಿ ಅದನ್ನು ತಡೆಹಿಡಿಯಲಾಗಿದೆ ಎಂದು ಕುಮಾರಸ್ವಾಮಿ ಹಾಸನ ಟಿಕೆಟ್ ವಿಳಂಬಕ್ಕೆ ಕಾರಣ ನೀಡಿದ್ದಾರೆ.

Exit mobile version