Site icon PowerTV

ಮಹಾ ಎಡವಟ್ಟು : ಬಿಜೆಪಿ ಶಾಸಕ ಪ್ರೀತಂಗೌಡ ಆಡಿಯೋ ವೈರಲ್

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿನಲ್ಲಿಯೇ ಬಿಜೆಪಿ ನಾಯಕರು ಮಹಾ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಇದು ರಾಜ್ಯ ಬಿಜೆಪಿಗೆ ಡ್ಯಾಮೇಜ್ ತರುವ ಸಾಧ್ಯತೆಯಿದೆ.

ಹೌದು, ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡರದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಈ ಬಗ್ಗೆ ಬೇಜಾನ್ ಟಾಕ್ ಶುರುವಾಗಿದೆ.

ಅಕ್ರಮ ಗೋಮಾಂಸ ಮಾರಾಟದ ಕೇಂದ್ರದ ಮೇಲೆ ದಾಳಿ ಮಾಡಿದ್ದ ಪೊಲೀಸರಿಗೆ ಶಾಸಕರು ವಾಪಸ್ ಬರುವಂತೆ ಬಿಜೆಪಿ ಶಾಸಕ ಪ್ರೀತಂಗೌಡ ಅವರು ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ. ಇದು ಆಡಿಯೋನಲ್ಲಿ ಬಹಿರಂಗವಾಗಿದೆ.

ಹಾಸನದ ಶ್ರೀನಗರ ಬಡಾವಣೆಯಲ್ಲಿ ದಾಳಿ ಮಾಡಿದ್ದ ವೇಳೆ ಪೊಲೀಸ್ ಅಧಿಕಾರಿಗಳ ಜೊತೆ ಬಿಜೆಪಿ ಶಾಸಕ ಪ್ರೀತಂಗೌಡ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದಾಗಿದೆ. ಇನ್ಸ್​ಪೆಕ್ಟರ್​ ಯೋಗಿಶ್​ ಜೊತೆ ಶಾಸಕರು ಮಾತನಾಡಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಆಕಾಂಕ್ಷಿಗಳು ಕಣ್ಣೀರು ಹಾಕ್ತಿದ್ದಾರೆ : HDK ಲೇವಡಿ 

ಎಲೆಕ್ಷನ್ ಕಣೋ ಬಾರೋ ನಿನ್ ದಮ್ಮಯ್ಯ

ಅಣ್ಣಾ ಯೋಗೇಶಣ್ಣ ಚುನಾವಣೆ ಸಂದರ್ಭ ಬಾರೋ ನಿನ್ ದಮ್ಮಯ್ಯ ಎಂದಿದ್ದಾರೆ. ಹೀಗಾಗಿ ಬಿಜೆಪಿ ಶಾಸಕರು ಅಕ್ರಮ ಗೋಮಾಂಸ ಮಾರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿ ಆಡಿಯೋ ಕ್ಷೇತ್ರದಾದ್ಯಂತ ವೈರಲ್ ಆಗಿ ಸಂಚಲನ ಮೂಡಿಸಿದೆ.

Exit mobile version