Site icon PowerTV

ಇದೆಂಥಾ ಹುಚ್ಚಾಟ : ಮದುವೆ ಮಂಟಪದಲ್ಲೇ ಗುಂಡು ಹಾರಿಸಿದ ವಧು

ಬೆಂಗಳೂರು : ಮದುಮಗಳು ಪಿಸ್ತೂಲಿನಿಂದ (ಬಂದೂಕು) ಗಾಳಿಯಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿ ಹುಚ್ಚಾಟ ಪ್ರದರ್ಶಿಸಿರುವ ಘಟನೆ ನಡೆದಿದೆ.

ಹೌದು, ಮದುವೆ ಸಂದರ್ಭದಲ್ಲಿ ವಧು ತಮಾಶೆಗಾಗಿ ಪಿಸ್ತೂಲಿನಿಂದ ನಾಲ್ಕು ಸುತ್ತು ಗುಂಡುಹಾರಿಸಿದ ಘಟನೆ ಉತ್ತರ ಪ್ರದೇಶದಲ್ಲಿನ ಹತ್ರಸಾದಲ್ಲಿ ನಡೆದಿದೆ.

ಹತ್ರಸಾದಲ್ಲಿ ನಡೆಯುತ್ತಿದ್ದ ವಿವಾಹದ ವೇಳೆಯಲ್ಲಿ ಸಂಬಂಧಿಕರೊಬ್ಬರು ವಧು ರಾಗ್ನಿಗೆ ಸಾರ್ಟ್ಕ್ ಗನ್ ನೀಡಿದ್ದಾರೆ. ಆಕೆ ಗನ್ ಹಿಡಿದು ಗಾಳಿಯಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಈ ದೃಷ್ಯವನ್ನು ಮತ್ತೊಬ್ಬ ಸಂಬಂಧಿಕ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಗುಂಡು ಹಾರಿಸುವ ವೇಳೆ ವರ ಪಕ್ಕದಲ್ಲೇ ಕೂತಿದ್ದರೂ ಘಟನೆ ವೇಳೆ ಸ್ವಲ್ಪವೂ ಎದ್ದು ನಿಲ್ಲಲಿಲ್ಲ. ಇದನ್ನು ಗಮನಿಸಿರುವ ನೆಟ್ಟಿಗರು ಇದೆಂಥಾ ಹುಚ್ಚಾಟ ಎಂದು ಕಾಮೆಂಟ್ ಹರಿಬಿಟ್ಟಿದ್ದಾರೆ. ಉತ್ತರ ಪ್ರದೇಶ, ಬಿಹಾರದಲ್ಲಿ ಇಂತಹ ಘಟನೆಗಳು ಆಗಾಗ ನಡೆತಯುತ್ತಲೇ ಇರುತ್ತವೆ.

ವಧು ಗುಂಡು ಹಾರಿಸುತ್ತಿರುವ ದೃಷ್ಯಾವಳಿಗಳು ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಕೇಸ್ ದಾಖಲಾಗುತ್ತಿದ್ದಂತೆಯೇ ವಧು ರಾಗ್ನಿ ತಲೆ ಮರೆಸಿಕೊಂಡಿದ್ದಾಳೆ. ಇದೀಗ ಗುಂಡುಹಾರಿಸಿದ ರಾಗ್ನಿಗಾಗಿ ಪೊಲಿಸರು ತೀವ್ರ ಶೋಧಕಾರ್ಯ ಕೈಗೊಂಡಿದ್ದಾರೆ.

Exit mobile version