Site icon PowerTV

ಹಾಸನದಲ್ಲಿ ‘ಮನೆ ಹಾಳು ಮಾಡುವ ಶಕುನಿಗಳು’ ಇದ್ದಾರೆ : ಕುಮಾರಸ್ವಾಮಿ ಕಿಡಿ

ಬೆಂಗಳೂರು : ಹಾಸನದಲ್ಲಿ ಜೆಡಿಎಸ್​ ಟಿಕೆಟ್​ ಕಗ್ಗಂಟು ಇನ್ನೂ ಅಂತ್ಯ ಕಂಡಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು, ಹಾಸನದಲ್ಲಿ ಮನೆ ಹಾಳು ಮಾಡುವ ಶಕುನಿಗಳು ಇದ್ದಾರೆ ಎಂದು ಕಿಡಿಕಾರಿದ್ದಾರೆ.

ಹಾಸನ ಜೆಡಿಎಸ್ ಟಿಕೆಟ್​ ಗೊಂದಲ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿ, ಕುರುಕ್ಷೇತ್ರ ಯುದ್ಧ ಶಕುನಿಯಿಂದಲೇ ಆಗಿದೆ. ಹಾಸನದಲ್ಲಿಯೂ ಶಕುನಿಗಳು ತಲೆ ಕೆಡಿಸುತ್ತಿದ್ದಾರೆ. ಮನೆ ಹಾಳು ಮಾಡುವ ಶಕುನಿಗಳು ಹಾಸನದಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಹಾಸನದಲ್ಲಿ ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತೇವೆ. ದೇವೇಗೌಡರಿಗೆ ರೇವಣ್ಣರ ಮನವೊಲಿಸುವ ಶಕ್ತಿ ಇಲ್ಲ. ಕಳೆದ 15 ವರ್ಷದಿಂದ ಹಲವು‌ ವಿಷಯ ನುಂಗಿಕೊಂಡಿದ್ದೇನೆ. ತಪ್ಪು ಮಾಡದಿದ್ರೂ ತಲೆ ಮೇಲೆ ಕೂರಿಸಿಕೊಳ್ಳಬೇಕಾಯ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ : ಸಮೃದ್ಧಿ ಮಂಜುನಾಥ್ ಪರ ಕುಮಾರಸ್ವಾಮಿ ಭರ್ಜರಿ ಮತಬೇಟೆ

ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ

ಇನ್ನೂ ಹಾಸನ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್ ಗೌಡ​ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹಾಸನ ಟಿಕೆಟ್‌ ಯಾರಿಗೆ ಸಿಕ್ಕರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಎರಡನೇ ಪಟ್ಟಿಯಲ್ಲಿ ಹಾಸನ ಅಭ್ಯರ್ಥಿ ಹೆಸರು ಬಿಡುಗಡೆ ಮಾಡಲಾಗುತ್ತದೆ. ಹಾಸನದಲ್ಲಿ ಈ ಬಾರಿ ಜೆಡಿಎಸ್ ಗೆಲುವು ಸಾಧಿಸುತ್ತದೆ. ನೂರಕ್ಕೆ ನೂರು ಭಾಗ ಜೆಡಿಎಸ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದ್ದಾರೆ.

ಒಟ್ಟಾರೆ, ಹಾಸನದಲ್ಲಿ ಕಾರ್ಯಕರ್ತನಿಗೇ ಟಿಕೆಟ್​ ಕೊಡುತ್ತೇವೆ ಎಂಬುದು ಎಚ್.ಡಿ ಕುಮಾರಸ್ವಾಮಿ ಹಠ. ಆದ್ರೆ, ಶತಾಯಗತಾಯ ಪತ್ನಿಗೇ ಟಿಕೆಟ್ ಕೊಡಿಸಬೇಕು ಎಂಬುದು ಮಾಜಿ ಸಚಿವ ಎಚ್.ಡಿ ರೇವಣ್ಣ ಅವರ ಪಟ್ಟು. ಈ ಸಂಬಂಧ ದೇವೇಗೌಡರ ಜೊತೆ ಸರಣಿ ಮಾತುಕತೆ ನಡೆದ್ರೂ ಹಾಸನ ಟಿಕೆಟ್ ಗೊಂದಲ ಬಗೆಹರಿದಿಲ್ಲ.

Exit mobile version