Site icon PowerTV

ಮಗನಿಗೆ ಟಿಕೆಟ್​ ಕೊಡಿಸಲು ವಿ ಸೋಮಣ್ಣ ಸರ್ಕಸ್​ 

ನವದೆಹಲಿ :ವಿಧಾನಸಭೆ ಚುನಾವಣೆ ಇನ್ನೇನು ಸನಿಹದಲ್ಲೇ ಇದೆ. ಆದರೆ, ಇನ್ನೂ  ಕೂಡ ಕೇಸರಿ ಪಡೆ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿಲ್ಲ ಅಂದ್ರೆ  ಚುನಾವಣೆಯ ಟಿಕೆಟ್ ಕಾವು ಮಾತ್ರ ಹಾಗೇ ಇದೆ. ಈ ಬಾರಿ  ರಾಜ್ಯ ವಿಧಾನ ಸಭೆ ಚುನಾವಣೆ ಗೆಲ್ಲಲು ಅಭ್ಯರ್ಥಿಗಳು ಪಟತೊಟ್ಟಿದ್ದಾರೆ. ಇನ್ನೂ ಟಿಕೇಟ್​ಗಾಗಿ ಕೆಲವು ಮುಖಂಡರು ಬಂಡಾಯ ಎದ್ದಿದ್ದಾರೆ. ಇಂತಹ ಸಂದರ್ಭದಲ್ಲಿ ವಿ ಸೋಮಣ್ಣ (V Somanna) ತನ್ನ ಮಗನಿಗಾಗಿ ಟಿಕೆಟ್ ನೀಡಲು ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ವಿರುದ್ಧ ನಾನು ಸ್ಪರ್ಧೆ ಮಾಡಲ್ಲ : ವಿ.ಸೋಮಣ್ಣ

ಹೌದು,  ಗುಬ್ಬಿ ಕ್ಷೇತ್ರದಿಂದ ಪುತ್ರನಿಗೆ ಟಿಕೆಟ್ ​ನೀಡಬೇಕೆಂದು ಸೋಮಣ್ಣ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ದೂರವಾಣಿ ಮೂಲಕ ಅಮಿತ್ ಶಾ ಜೊತೆಗೂ ಮಾತುಕತೆ ನಡೆಸಿದ್ದು, ಯಾವುದೇ ನಾಯಕರ ಮಕ್ಕಳಿಗೆ ಟಿಕೆಟ್ ಕೊಟ್ಟಲ್ಲಿ ನನ್ನ ಮಗ ಅರುಣ್​ಗೂ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಅಪ್ಪ ಮಕ್ಕಳಿಗೆ ಟಿಕೆಟ್ ಕೊಡಲ್ಲ ಅಂದರೆ ನನಗೆ ಟಿಕೆಟ್ ಬೇಡ. ನನ್ನ ಮಗ ಅರುಣ್ ಗೆ ಕೊಡಿ ಎಂದು ಅಮಿತ್​ ಶಾಗೆ ಮನವಿ ಮಾಡಿದ್ದಾರೆ.

ಆದ್ರೆ, ಸೋಮಣ್ಣ ಮಾತಿಗೆ ಅಮಿತ್ ಶಾ ಆಕ್ಷೇಪ ವ್ಯಕ್ತಪಡಿಸಿದ್ದು, ನೀವು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು. ನಿಮ್ಮ ಮಗನ ಸ್ಪರ್ಧೆ ಬಗ್ಗೆ ನಾವು ನಿರ್ಧಾರ ಮಾಡುತ್ತೇವೆ. ದೊಡ್ಡ ಮಟ್ಟದಲ್ಲಿ ಪಕ್ಷಕ್ಕೆ ನಿಮ್ಮ ಅವಶ್ಯಕತೆ ಇದೆ ಎಂದಿದ್ದಾರೆ ಎನ್ನಲಾಗಿದೆ.

ಹೀಗೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

 

Exit mobile version