Site icon PowerTV

ಒಂದೇ ದಿನ, ಮೂವರ ಪಾಲಾದ ‘ಆರೆಂಜ್ ಕ್ಯಾಪ್’ : ರೇಸ್ ನಲ್ಲಿ ಗಾಯಕ್ವಾಡ್ ಫಸ್ಟ್

ಬೆಂಗಳೂರು : ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಮೇಲೆ ಹಲವು ಬ್ಯಾಟರ್ ಗಳು ಕಣ್ಣಿಟ್ಟಿದ್ದಾರೆ. ಮೊದಲ ಪಂದ್ಯದಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಋತುರಾಜ್ ಗಾಯಕ್ವಾಡ್ ಆರೆಂಜ್ ಕ್ಯಾಪ್ ಲೀಸ್ಟ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ, ಒಂದೇ ದಿನ ಈ ಆರೆಂಜ್ ಕ್ಯಾಪ್ ಮೂವರ ಪಾಲಾಗಿದೆ.

ಹೌದು, ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ನಿನ್ನೆ (ಶನಿವಾರ) ಒಂದೇ ದಿನದಲ್ಲಿ ಆರೆಂಜ್ ಕ್ಯಾಪ್ ಮೂವರ ಆಟಗಾರರ ಬಳಿ ಹೋಗಿದೆ.

ನಿನ್ನೆಯ ಮೊದಲ ಪಂದ್ಯದಲ್ಲಿ ಅರ್ಧಶತಕ ಪೂರೈಸಿದ ರಾಜಸ್ಥಾನ ರಾಯಲ್ಸ್ ಆಟಗಾರ ಬಟ್ಲರ್‌ಗೆ (152) ಆರೆಂಜ್ ಕ್ಯಾಪ್ ನೀಡಲಾಯಿತು. ನಂತರ ಡೆಲ್ಲಿ ನಾಯಕ ಡೇವಿಡ್ ವಾರ್ನರ್ (158) ಪಾಲಾಯಿತು. ರಾತ್ರಿ ನಡೆದ ಪಂದ್ಯದಲ್ಲಿ 40 ರನ್ ಗಳಿಸಿದ್ದ ಚೆನ್ನೈ ಓಪನರ್ ಋತುರಾಜ್ (189) ಅವರಿಗೆ ಆರೆಂಜ್ ಕ್ಯಾಪ್ ನೀಡಲಾಯಿತು.

ವಾಂಖೆಡೆಯಲ್ಲಿ ಟೆಸ್ಟ್ ಆಡುವಾಸೆ

ಟೀಂ ಇಂಡಿಯಾ ಕ್ರಿಕೆಟಿಗ ಅಜಿಂಕ್ಯ ರಹಾನೆ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ನಲ್ಲಿ ಕಣಕ್ಕಿಳಿದ ಮೊದಲ ಪಂದ್ಯದಲ್ಲಿಯೇ ಮುಂಬೈ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದ್ದಾರೆ. ನಿನ್ನೆಯ ಐಪಿಎಲ್ ಪಂದ್ಯದಲ್ಲಿ 27 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 61 ರನ್ ಗಳಿಸಿದ್ದರು.

ಇದನ್ನೂ ಓದಿ : IPL ಚರಿತ್ರೆಯಲ್ಲೇ ವಿಶಿಷ್ಟ ದಾಖಲೆ : ಈ ದಾಖಲೆ ಮಾಡಿದ ಏಕೈಕ ಆಟಗಾರ ‘ಗಾಯಕ್ವಾಡ್’

ಇದೀಗ, ರಹಾನೆ ಅವರು ವಾಂಖೆಡೆ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ಆಡುವ ಆಸೆಯಿದೆ ಎಂದು ಹೇಳಿದ್ದಾರೆ. ನನ್ನ ವೃತ್ತಿ ಜೀವನದ ಒಂದು ಹಂತದಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಟೆಸ್ಟ್ ಪಂದ್ಯವನ್ನು ಆಡುವ ಭರವಸೆ ಇದೆ ಎಂದು ರಹಾನೆ ಹೇಳಿದ್ದಾರೆ.

ಆರೆಂಜ್ ಕ್ಯಾಪ್ ರೇಸ್ ನಲ್ಲಿರುವ ಬ್ಯಾಟರ್ ಗಳು

Exit mobile version