Site icon PowerTV

ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಎಂಟ್ರಿ : ಮೋದಿ ಶೆಡ್ಯೂಲ್ ಹೀಗಿದೆ ನೋಡಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜ್ಯಕ್ಕೆ ಆಗಮಿಸಲಿದ್ದು, ನಾಳೆ ಬಂಡೀಪುರದಲ್ಲಿ ಟೈಗರ್ ಸಫಾರಿ ಹೊರಡಲಿದ್ದಾರೆ.

ಇಂದು ರಾತ್ರಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ ಅವರು, ನಗರದ ಬ್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ತಂಗಲಿದ್ದಾರೆ.

ನಾಳೆ(ಏಪ್ರಿಲ್ 9) ಬೆಳಗ್ಗೆ 6.30ಕ್ಕೆ ಹೆಲಿಕಾಪ್ಟರ್ ಮೂಲಕ ಬಂಡೀಪುರಕ್ಕೆ ತೆರಳಲಿದ್ದಾರೆ. ಅಲ್ಲಿ ಸಫಾರಿ ನಡೆಸಿ, ಅರಣ್ಯಾಧಿಕಾರಿಗಳ ಜೊತೆಗೆ ಸಂವಾದ ನಡೆಸಲಿದ್ದಾರೆ. ನಂತರ ತಮಿಳುನಾಡಿನ ಮುದುಮಲೈ ಅರಣ್ಯಪ್ರದೇಶಕ್ಕೆ ತೆರಳಲಿದ್ದಾರೆ.

ಹೀಗಿದೆ ಪ್ರಧಾನಿ ಮೋದಿ ಶೆಡ್ಯೂಲ್

* ಏಪ್ರಿಲ್ 8ರಂದು (ಇಂದು) ರಾತ್ರಿ 8.30ಕ್ಕೆ ಮೈಸೂರಿನ ಮಂಡಕ್ಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ

* ಬ್ಯಾಡಿಸನ್ ಬ್ಲೂ ಹೊಟೇಲ್‌ನಲ್ಲಿ ಮೋದಿ ವಾಸ್ತವ್ಯ

*ಏಪ್ರಿಲ್ 9ರಂದು (ನಾಳೆ) ಬೆಳಗ್ಗೆ 6.30ಕ್ಕೆ ಸೇನಾ ಹೆಲಿಕಾಪ್ಟರ್‌ ನಲ್ಲಿ ಬಂಡೀಪುರದತ್ತ ಪ್ರಯಾಣ

* ಮೇಲುಕಾಮನ ಹಳ್ಳಿ ಸಫಾರಿ ಕೌಂಟರ್‌ನಿಂದ ಸಫಾರಿ ಆರಂಭ

* 2 ಗಂಟೆಗಳ ಕಾಲ ಪ್ರಧಾನಿ ಮೋದಿ ಸಫಾರಿ

* ಕೇವಲ 5 ವಾಹನಗಳಿಗೆ ಮಾತ್ರ ಸಫಾರಿ ಅವಕಾಶ

* ವೀವ್ಯೂ ಪಾಯಿಂಟ್ ಮತ್ತು ಕಳ್ಳಬೇಟೆ ತಡೆ ಶಿಬಿರಕ್ಕೆ ಪ್ರಧಾನಿ ಮೋದಿ ಭೇಟಿ

* ಮೈಸೂರಿಗೆ ಹೆಲಿಕಾಪ್ಟರ್ ಮೂಲಕ ವಾಪಸ್

Exit mobile version