Site icon PowerTV

ಭವಾನಿಗೆ ನಿರಾಸೆ, ‘ಹಾಸನ ಟಿಕೆಟ್ ಸ್ವರೂಪ್ ಗೌಡ’ಗೇ ಫಿಕ್ಸ್?

ಬೆಂಗಳೂರು : ಹಾಸನ ಜೆಡಿಎಸ್ ಟಿಕೆಟ್ ಕಾಳಗ ಫೈನಲ್ ಹಂತಕ್ಕೆ ತಲುಪಿದೆ. ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರಿಗೇ ಟಿಕೆಟ್ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಡಕ್ ಆಗಿ ಹೇಳಿದ್ದಾರೆ.

ಸ್ವರೂಪ್‌ಗೌಡಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಎಚ್.ಡಿ. ಕುಮಾರಸ್ವಾಮಿ, ಕಾರ್ಯಕರ್ತರ ಅಭಿಪ್ರಾಯವೇ ನಮ್ಮ ಅಭಿಪ್ರಾಯ. ಕಾರ್ಯಕರ್ತನಿಗೇ ಟಿಕೆಟ್ ಕೊಡುವುದಾಗಿ ಈಗಾಗಲೇ ತೀರ್ಮಾನ ಮಾಡಿಯಾಗಿದೆ. ಶೀಘ್ರದಲ್ಲಿಯೇ ಘೋಷಣೆ ಮಾಡಲಾಗುವುದು ಎಂದು ಹೇಳುವ ಮೂಲಕ ಸ್ವರೂಪ್‌ಗೆ ಟಿಕೆಟ್ ಫಿಕ್ಸ್ ಎಂಬ ಸುಳಿವು ನೀಡಿದ್ದಾರೆ.

ನನ್ನತ್ರ ಯಾವ ಬ್ಲ್ಯಾಕ್​ಮೇಲ್ ನಡೆಯಲ್ಲ. ಯಾವುದೇ ಬ್ಲ್ಯಾಕ್​​​ಮೇಲ್​ಗೆ ಹೀಲ್ಡ್​​ ಆಗಲ್ಲ. ನಾನು ಹೋರಾಟ ಮಾಡ್ತೀರೋದು ಮತ್ತೆ ಮೈತ್ರಿ ಸರ್ಕಾರ ತರೋಕ್ಕಲ್ಲ. ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂಬುದು ಈಗಾಗಲೇ ತೀರ್ಮಾನ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಭವಾನಿಗೆ ಟಿಕೆಟ್ ಮಿಸ್ ಆದ್ರೆ, ಭಂಡಾಯ ಸ್ಪರ್ಧೆ : HDKಗೆ ವಾರ್ನಿಂಗ್ ಕೊಟ್ರಾ ರೇವಣ್ಣ

ದತ್ತ ಯಾರೆಂದೇ ಗೊತ್ತಿಲ್ಲ

ವೈಎಸ್ ವಿ ದತ್ತ ಯಾರೆಂದೇ ನನಗೆ ಗೊತ್ತಿಲ್ಲ ಎಂದು ಇದೇ ವೇಳೆ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಅವರು(ದತ್ತ) ತುಂಬಾ ದೊಡ್ಡವರು. ನನ್ನ ಸಣ್ಣ ಪಕ್ಷಕ್ಕೆ ಅವರು ಏಕೆ ಬರುತ್ತಾರೆ? ಅವರು ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸಲು ಹೊರಟವರು. ನನ್ನ ಪಕ್ಷದಲ್ಲಿ ಅವರಿಗೆ ಏನು ಸಿಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾನು ದತ್ತ ಅವರಿಗೆ ಏನು ಅನ್ಯಾಯ ಮಾಡಿದ್ದೀವಿ ಅಂತ ಬಹಿರಂಗಪಡಿಸಲಿ. ನಮಗಿಂತ ಹೆಚ್ಚಾಗಿ 40 ವರ್ಷಗಳಿಂದ ಎಚ್.ಡಿ ದೇವೇಗೌಡಿಗೆ ಅವರು ಮಾನಸ ಪುತ್ರರಾಗಿದ್ದರು. ಕೊನೆಗೆ ನನ್ನ ಮೇಲೆ ಆರೋಪ ಮಾಡಿ ಹೋದರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Exit mobile version