Site icon PowerTV

ಲಿಂಗಾಯತರು, ಒಕ್ಕಲಿಗರು ಭಿಕ್ಷುಕರೇ? : ಡಿಕೆಶಿಗೆ ಸಿ.ಟಿ ರವಿ ಪ್ರಶ್ನೆ

ಬೆಂಗಳೂರು : ಲಿಂಗಾಯತರು ಹಾಗೂ ಒಕ್ಕಲಿಗರು ಭಿಕ್ಷುಕರಲ್ಲ. ಇದು ನಮಗೆ ಬೇಕಾಗಿಲ್ಲ ಎಂದು ಮೀಸಲಾತಿ ಕುರಿತು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಬಿಜೆಪಿ ಶಾಸಕ ಸಿ.ಟಿ ರವಿ ತಿರುಗೇಟು ಕೊಟ್ಟಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಸಿ.ಟಿ ರವಿ, ಡಿ.ಕೆ ಶಿವಕುಮಾರ್ ಅವರೇ, ಕಾಂಗ್ರೆಸ್ ಪ್ರಕಾರ ಮೀಸಲಾತಿ ಪಡೆಯುವವರೆಲ್ಲರೂ ಭಿಕ್ಷುಕರೇ? ಎಂದು ಪ್ರಶ್ನೆ ಮಾಡಿದ್ದಾರೆ.

ಸಂವಿಧಾನದ ಅಡಿಯಲ್ಲಿ ಲಿಂಗಾಯತರು ಹಾಗೂ ಒಕ್ಕಲಿಗರಿಗೆ ಮೀಸಲಾತಿ ನೀಡುವ ಮಹತ್ಕಾರ್ಯವನ್ನು ನಮ್ಮ ಸರ್ಕಾರ ಮಾಡಿದೆ. ಸದಾ ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್, ಲಿಂಗಾಯತರು ಮತ್ತು ಒಕ್ಕಲಿಗರನ್ನು ಭಿಕ್ಷುಕರಿಗೆ ಹೋಲಿಸಿ ಅವರನ್ನು ಅವಮಾನಿಸಿದೆ. ಡಿ.ಕೆ ಶಿವಕುಮಾರ್ ಅವರೇ, ಕಾಂಗ್ರೆಸ್ ಪ್ರಕಾರ ಮೀಸಲಾತಿ ಪಡೆಯುವವರೆಲ್ಲರೂ ಭಿಕ್ಷುಕರೇ? ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಸಿ.ಟಿ ರವಿ ಅಂದ್ರೆ ಕನ್ನಡಕ್ಕೆ ‘ಕಂಟಕ ರವಿ’ : ಕಾಂಗ್ರೆಸ್ ಲೇವಡಿ

ಡಿಕೆಶಿ ಹೇಳಿದ್ದೇನು?

ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡಬೇಕು. ಆದರೆ, ಬಿಜೆಪಿ ವೈಯಕ್ತಿಕವಾದ ತೀರ್ಮಾನ ಮಾಡಿದೆ. 30-40 ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಬರಲಿದೆ. ಆಗ ಇದೆಲ್ಲವನ್ನ ರದ್ದು ಮಾಡುತ್ತೇವೆ. ನಮಗೆ ಯಾರ ಮೇಲೂ ದ್ವೇಷ ಇಲ್ಲ ಎಂದು ಹೇಳಿದ್ದರು.

ಇಲ್ಲಿ ಯಾರೂ ಭಿಕ್ಷುಕರಲ್ಲ. ಎಸ್ಸಿ, ಎಸ್ಟಿ,  ಮುಸ್ಲಿಮರು, ಹಿಂದುಳಿದ ವರ್ಗದವರು ಮನುಷ್ಯರಲ್ಲವೇ? ಅಲ್ಪಸಂಖ್ಯಾತರಿಗೆ ಮೀಸಲಾಗಿದ್ದ ಶೇ.4 ರಷ್ಟು ಮೀಸಲಾತಿಯನ್ನು ತೆಗೆದಿದ್ದು ಯಾಕೆ? ಎಂದು ಡಿಕೆಶಿ ಕಿಡಿಕಾರಿದ್ದರು.

Exit mobile version