Site icon PowerTV

ಸೋಮಶೇಖರ್ ಚಲನಚಿತ್ರ ನಿರ್ಮಾಣ ನಿರ್ವಾಹಕರ ಸಂಘ ನೂತನ ಅಧ್ಯಕ್ಷ

ಬೆಂಗಳೂರು : ಕರ್ನಾಟಕ ಚಲನಚಿತ್ರ ನಿರ್ಮಾಣ ನಿರ್ವಾಹಕರ ಸಂಘದ ನೂತನ ಪದಾಧಿಕಾರಿಗಳ ಪಟ್ಟಿ ರಿಲೀಸ್ ಆಗಿದೆ.

ಕರ್ನಾಟಕ ಚಲನಚಿತ್ರ ನಿರ್ಮಾಣ ನಿರ್ವಾಹಕ ಸಂಘದ 2022 ಹಾಗೂ 2023ರ ಸಾಲಿನ ಚುನಾವಣೆ ಇದೇ ತಿಂಗಳ 12ರಂದು‌ ನಡೆದಿತ್ತು. ಇದೀಗ ವಿಜೇತರಾದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಚಲನಚಿತ್ರ ನಿರ್ಮಾಣ ನಿರ್ವಾಹಕರ ಸಂಘದ ನೂತನ ಅಧ್ಯಕ್ಷರಾಗಿ ಸೋಮಶೇಖರ್.ಎಸ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚಲುವರಾಜು.ಎಸ್, ರಮೇಶ್ ಬಿ.ಜಿ ಅವರುಆಯ್ಕೆಗೊಂಡಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ನರಸಿಂಹಮೂರ್ತಿ ಬಿ.ಜಿ, ಸಹಕಾರ್ಯದರ್ಶಿಗಳಾಗಿ ನರಸಿಂಹ ಹೆಚ್, ನರೇಶ್ ಕುಮಾರ್ ಆರ್, ಶಶಿಧರ್ ಜಿ ಆಯ್ಕೆಯಾಗಿದ್ದಾರೆ. ಖಂಜಾಚಿಯಾಗಿ ಸುನಿಲ್ ಕುಮಾರ್ ಬಿ.ಕೆ ಅವರು ಆಯ್ಕೆಗೊಂಡಿದ್ದಾರೆ.

ಗೆಲುವು ಪಡೆದ ಎಲ್ಲಾ ಪದಾಧಿಕಾರಿಗಳಿಗೆ ಸಂಘದ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಪ್ರಕಾಶ್ ಮಧುಗಿರಿ, ಸುಧೀಂದ್ರ, ರವಿಶಂಕರ್ ಸಹಕಾರ ಜೊತೆಗಿರುತ್ತದೆ. ನೂತನ ಪದಾಧಿಕಾರಿಗಳು ವಾಣಿಜ್ಯ ಚಲನಚಿತ್ರ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಅವರನ್ನು ಭೇಟಿ ಮಾಡಿ ಸಹಕಾರ ಕೋರಿದ್ದಾರೆ.

Exit mobile version