Site icon PowerTV

ಗಂಡ ‘ಚಾಕೋಲೆಟ್’ ತರದಿದ್ದಕ್ಕೆ ಹೆಂಡ್ತಿ ಆತ್ಮಹತ್ಯೆ

ಬೆಂಗಳೂರು : ತನ್ನ ಗಂಡ ಹೊಡೆಯುತ್ತಾನೆ, ಬೈಯ್ಯುತ್ತಾನೆ. ವರದಕ್ಷಿಣೆಗಾಗಿ ಕಿರುಕುಳ ಕೊಡ್ತಾನೆ ಎಂಬಿತ್ಯಾದಿ ಕಾರಣದಿಂದ ಹೆಂಡ್ತಿ ಅತ್ಮಹತ್ಯೆಗೆ ಶರಣಾಗಿರುವ ಪ್ರಕರಣಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಮಧ್ಯೆ, ಗಂಡ ಚಾಕೋಲೆಟ್ ತಂದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಹೆಂಡ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹೌದು, ಪತಿ ಚಾಕೊಲೇಟ್ ತಂದು ಕೊಡಲಿಲ್ಲ ಎಂದ ಪತ್ನಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಂದಿನಿ ಮೃತ ಮಹಿಳೆಯಾಗಿದ್ದಾಳೆ.

ಪತಿ ಕೆಲಸಕ್ಕೆ ಹೋಗುವಾಗ ಚಾಕೋಲೆಟ್ ತರಲು ಹೇಳಿದ್ದು, ಮಧ್ಯಾಹ್ನವಾದರೂ ಪತಿ ತೆಗೆದುಕೊಂಡು ಬಂದಿಲ್ಲ. ಫೋನ್ ಕರೆ ಕೂಡಾ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ನಂದಿನಿ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ. ನಂದಿನಿಗೆ ಇಬ್ಬರು ಮಕ್ಕಳಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಸರ್.. ನನ್ನ ಹೆಂಡ್ತಿ ಜಾಸ್ತಿ ನಿದ್ರೆ ಮಾಡ್ತಾಳೆ : ಪತಿಯಿಂದಲೇ ಪೊಲೀಸರಿಗೆ ದೂರು

ಘಟನೆ ಹಿನ್ನೆಲೆ ಏನು?

6 ವರ್ಷದ ಹಿಂದೆ ಮದುವೆಯಾಗಿದ್ದ ಮೃತ ನಂದಿನಿ‌ಗೆ ಇಬ್ಬರು ಮಕ್ಕಳಿದ್ದಾರೆ. ನಂದಿನಿ ಪತಿ ಸಲೂಲ್​ನಲ್ಲಿ ಕೆಲಸ ಮಾಡಿಕೊಂಡಿದ್ದು, ಬೆಳಗ್ಗೆ ಪತಿ ಕೆಲಸಕ್ಕೆ ಹೋಗುವಾಗ ಚಾಕೋಲೆಟ್ ತೆಗೆದುಕೊಂಡು ಬರುವಂತೆ ಹೇಳಿದ್ದಳಂತೆ. ಆದೆರೆ, ಮಧ್ಯಾಹ್ನವಾದರೂ ಪತಿ ಚಾಕೋಲೆಟ್ ತಂದು ಕೊಟ್ಟಿಲ್ಲ. ಅಲ್ಲದೇ ಪತ್ನಿ ಫೋನ್ ಕರೆಗೂ ಸ್ಪಂದಿಸಿಲ್ಲ. ಇದರಿಂದ ಮನನೊಂದು ಈ ಘಟನೆ ನಡೆದಿದೆ.

ಪತಿ ಮನೆಗೆ ಬಂದು ನೋಡಿದಾಗ ಪತ್ನಿ ನಂದಿನಿ ಆತ್ಮಹತ್ಯೆ (ನೇಣು)ಗೆ ಶರಣಾಗಿದ್ದಾಳೆ. ಕೂಡಲೇ ಪತಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ವೇಳೆಗೆ ಪತ್ನಿ ನಂದಿನಿ ಸಾವನ್ನಪ್ಪಿದ್ದಾಳೆ. ಕ್ಷುಲ್ಲಕ ಕಾರಣದಿಂದ ೀ ಘಟನೆ ನಡೆದಿದೆ. ಆದರೆ, ಈ ಬಗ್ಗೆ ಪೊಲೀಸರು ಯಾವುದೇ ಖಚಿತ ಕಾರಣ ನೀಡಿಲ್ಲ.

Exit mobile version