Site icon PowerTV

Viral Video: ಡ್ರೆಸ್ಸಿಂಗ್ ರೂಂನಲ್ಲಿ ವಿರಾಟ್ ಸಂಭ್ರಮವೋ.. ಸಂಭ್ರಮ

ಬೆಂಗಳೂರು : ಐಪಿಎಲ್ ನ ನಿನ್ನೆಯ ಪಂದ್ಯದಲ್ಲಿ ಮುಂಬೈ ವಿರುದ್ಧ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲೇ ದೊಡ್ಡ ಜಯ ಸಾಧಿಸಿರುವುದು ತಂಡದ ಆಟಗಾರರು ಹಾಗೂ ಅಭಿಮಾನಿಗಳ ಹುಮ್ಮಸ್ಸನ್ನು ಹೆಚ್ಚಾಗುವಂತೆ ಮಾಡಿದೆ.

ಪಂದ್ಯ ಮುಗಿಸಿ ಡ್ರೆಸ್ಸಿಂಗ್ ರೂಮ್‌ಗೆ ಆಗಮಿಸಿದ ಆಟಗಾರರು, ‘ಆರ್‌ಸಿಬಿ.. ಆರ್‌ಸಿಬಿ..’ ಎಂದು ಘೋಷಣೆ ಕೂಗುತ್ತಾ ಎಂಜಾಯ್ ಮಾಡಿದ್ದಾರೆ. ಅಲ್ಲದೇ, ಎಲ್ಲಾ ಆಟಗಾರರು ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ಫ್ರಾಂಚೈಸಿ ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಬೂಮ್ರಾ ಅಲಭ್ಯತೆ ಬಗ್ಗೆ ರೋಹಿತ್ ಏನಂದ್ರು

ಆರ್ ಸಿಬಿ ವಿರುದ್ಧದ ಸೋಲಿನ ಬಳಿಕ ಮುಂಬೈ ನಾಯಕ ರೋಹಿತ್ ಶರ್ಮಾ ಬೇಸರ ಹೊರಹಾಕಿದ್ದಾರೆ. ಮೊದಲ 6 ಓವರ್‌ಗಳಲ್ಲಿ ನಮ್ಮ ಆರಂಭ ಅದ್ಭುತವಾಗಿರಲಿಲ್ಲ. ಬಳಿಕ ತಿಲಕ್ ವರ್ಮಾ ಮತ್ತು ಕೆಲ ಬ್ಯಾಟರ್‌ಗಳು ರನ್ ಗಳಿಸಲು ಪ್ರಯತ್ನ ಪಟ್ಟರು. ಬೌಲಿಂಗ್‌ನಲ್ಲಿ ನಾವು ಅಂದುಕೊಂಡ ಯೋಜನೆಯಂತೆ ಸಾಗಲಿಲ್ಲ ಎಂದು ಹೇಳಿದ್ದಾರೆ.

ಇನ್ನೂ, ಮುಂಬೈ ಪ್ರಮುಖ ಬೌಲರ್ ಬೂಮ್ರಾ ಅಲಭ್ಯತೆ ಬಗ್ಗೆ ಮಾತನಾಡಿರುವ ರೋಹಿತ್, ಇಂಜುರಿಗಳು ನಮ್ಮ ಕೈಯಲ್ಲಿ ಇರುವುದಿಲ್ಲ. ನಮಗೆ ಅದರ ಬಗ್ಗೆ ಏನು ಮಾಡಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ದಿನೇಶ್ ಕಾರ್ತಿಕ್ ದಾಖಲೆ

ಟಿ-20ಯಲ್ಲಿ ಆರ್ ಸಿಬಿ ಆಟಗಾರ ದಿನೇಶ್ ಕಾರ್ತಿಕ್ ದಾಖಲೆ ಮಾಡಿದ್ದಾರೆ. ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ನೀಡಿದ ಕ್ಯಾಚ್ ಪಡೆದ ಇವರು ಟಿ-20 ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಆಗಿ 200 ಕ್ಯಾಚ್ ಹಿಡಿದ ಸಾಧನೆ ಮಾಡಿದ್ದಾರೆ.

ಟಿ-20ಯಲ್ಲಿ ಇದುವರೆಗೆ ಕೇವಲ ಮೂವರು ಮಾತ್ರ ಈ ಸಾಧನೆ ಮಾಡಿದ್ದಾರೆ. ಎಂ.ಎಸ್. ಧೋನಿ ಭಾರತದ ಪರ ಈ ಸಾಧನೆ ಮಾಡಿದ ಮೊದಲಿಗನಾಗಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟಾನ್ ಡಿ ಕಾಕ್ 207 ಕ್ಯಾಚ್ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.

Exit mobile version