Site icon PowerTV

ಕುಮಾರಣ್ಣನಿಗೆ ‘ಕಿಸ್’ ಕೊಟ್ಟ ಆ.. ‘ಮಹಿಳೆ ಗಂಡ’ ಹೇಳಿದ್ದೇನು?

ಬೆಂಗಳೂರು : ಬೆಂಗಳೂರಿನ ಯಶವಂತಪುರದಲ್ಲಿ ಪಂಚರತ್ನ ರಥಯಾತ್ರೆ ವೇಳೆ ಮಾಜಿ ಮುಖ್ಯಮಂತ್ರಿ  ಎಚ್.ಡಿ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಮಹಿಳಾ ಕಾರ್ಯಕರ್ತೆಯೊಬ್ಬರು ಮುತ್ತು ನೀಡಿದ ವಿಡಿಯೋ ಭಾರೀ ವೈರಲ್ ಆಗಿದೆ. ಈ ಬಗ್ಗೆ ಮುತ್ತು ನೀಡಿದ ಮಹಿಳೆ ಹಾಗೂ ಗಂಡ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಮಹಿಳೆ, ‘ನಾನು ಕುಮಾರಣ್ಣ ಅವರನ್ನು ಅಣ್ಣನ ಭಾವನೆಯಿಂದ ನೋಡಿದ್ದೇನೆ. ಕುಮಾರಸ್ವಾಮಿ ಅವರ ಬಳಿ ನನ್ನ ಸಮಸ್ಯೆ ಹೇಳಿಕೊಂಡಿದ್ದೇನೆ. ಅವರೂ ನನ್ನನ್ನು ಪ್ರೀತಿಯಿಂದ ಏನ್ ತಂಗಿ ಅಂತ ಅಭಿಮಾನದಿಂದ ಮಾತನಾಡಿಸಿದರು. ನನಗೆ ಬಹಳ ಖುಷಿಯಾಯಿತು ಎಂದು ಭದ್ರಾವತಿ ಮೂಲದ ಮಹಿಳೆ ಹೇಳಿದ್ದಾರೆ.

ಮಹಿಳೆಗೆ ಕುಮಾರಸ್ವಾಮಿ ಕೇಳಿದ್ದೇನು?

ಕುಮಾರಸ್ವಾಮಿ ಅವರನ್ನು ಹತ್ತಿರದಿಂದ ಮಾತನಾಡಿಸಿದೆ. ಮೊದಲು ಹೋದ ತಕ್ಷಣ ಕೈ ಕೊಟ್ಟೆ. ಥ್ಯಾಂಕ್ಸ್ ಹೇಳ್ದೆ. ಕುಮಾರಣ್ಣ ಏನ್ ತಂಗಿ ಅಂತ ಮೊದಲು ಮಾತನಾಡಿಸಿದ್ರು. ಇನಿಲ್ಲ ಅಣ್ಣಾ… ಹೇಗಿದ್ದೀರಾ ಅಣ್ಣ ಅಂದೆ. ಮತ್ತೆ ಯಾವ ಊರು ಅವ್ವಾ ಅಂದ್ರು. ಭದ್ರಾವತಿ ಅಂದೆ. ಹೋ.. ಭದ್ರಾವತಿನಾ, ನಮ್ಮ ಊರಿನವರೇ ಬಿಡು ತಂಗಿ ಅಂದ್ರು. ಎಲ್ಲೇ ವಾಸನಾ ಅಂದ್ರು. ಹೌದು ಅಣ್ಣ ಅಂದೆ. ಎಷ್ಟು ಜನ ಮಕ್ಕಳು ಅಂದ್ರು, ಮೂರು ಜನ ಅಂದೆ. ಕುಮಾರಣ್ಣರನ್ನು ಮಾತನಾಡಿಸಿದ್ದು ಬಹಳ ಖುಷಿ ಆಯ್ತು ಎಂದು ಮಹಿಳೆ ಹೇಳಿದ್ದಾರೆ.

ಮಹಿಳೆ ಗಂಡ ರಿಯಾಕ್ಷನ್ ಏನು?

ಇನ್ನೂ ಮುತ್ತುಕೊಟ್ಟ ಮಹಿಳೆ ಗಂಡ ಸಹ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಅಪ್ಪಾಜಿಗೌಡ, ದೇವೇಗೌಡ್ರು ಅವರ ಅಭಿಮಾನಿ. ಕುಮಾರಸ್ವಾಮಿ ಅವರು ಹತ್ತಿರದಿಂದ ಸಿಕ್ಕ ಕಾರಣ ಪತ್ನಿ ಹೋಗಿ ಮಾತನಾಡಿಸಿದ್ದಾರೆ. ಅವರು ತಂಗಿ ಎಂದು ಪ್ರಿತಿಯಿಂದ ಸಮಸ್ಯೆ ಆಲಿಸಿದ್ದಾರೆ. ನಾವು ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡುತ್ತೇವೆ. ಕುಮಾರಣ್ಣ ಮುಂದಿನ ಸಿಎಂ ಆಗಬೇಕು ಎಂದು ಬಯಸುತ್ತೇವೆ ಎಂದು ತಿಳಿಸಿದ್ದಾರೆ.

Exit mobile version