Site icon PowerTV

ಎಣ್ಣೆ ಏಟಲ್ಲಿ ಯುವಕರಿಗೆ ಥಳಿಸಿದ ಪಿಎಸ್ಐ

ಬೆಂಗಳೂರು : ರಾತ್ರಿ ಹೆಂಡ್ತಿ ಜೊತೆಗಿನ ಜಗಳವೋ? ಅಥವಾ ರಾತ್ರಿ ಕಂಠಪೂರ್ತಿ ಕುಡಿದ ಎಣ್ಣೆ ಪ್ರಭಾವವೋ ಗೊತ್ತಿಲ್ಲ. ಬೆಳಗ್ಗೆನೇ ಠಾಣೆಯಲ್ಲಿ ವಿಚಾರಣೆ ನೆಪದಲ್ಲಿ ಪಿಎಸ್ಐ ರೌದ್ರಾವತಾರ ಪ್ರದರ್ಶಿಸಿದ್ದಾನೆ.

ಹೌದು, ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಪಿಎಸ್ಐ ಅರ್ಜುನ್ ಗೌಡ ಕುಡಿದ ಮತ್ತಿನಲ್ಲಿ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಶುಕ್ರವಾರ ಮದ್ಯಾಹ್ನ ದೊಡ್ಡಹಳ್ಳಿ ಮತ್ತು ಕೆ.ರಾಮಪುರ ಗ್ರಾಮದ ಯುವಕರ ನಡುವೆ ಸಣ್ಣ ಗಲಾಟೆ ನಡೆದಿತ್ತು. ಈ ವಿಚಾರವಾಗಿ ವೈ.ಎನ್. ಹೊಸಕೋಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ವಿಚಾರಣೆಗೆ ಶನಿವಾರ ಬೆಳಿಗ್ಗೆ 5 ಜನ ಯುವಕರನ್ನು ಪಿಎಸ್ಐ ಠಾಣೆಗೆ ಕರೆಸಿಕೊಂಡಿದ್ದರು.

ವಿಚಾರಣೆ ವೇಳೆ ಇತರೇ ನಾಲ್ಕು ಪೋಲಿಸ್ ಸಿಬ್ಬಂದಿ ಜೊತೆ ಪಿಎಸ್ಐ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪಿಎಸ್ಐ ಅರ್ಜುನ್ ಗೌಡ ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ.

ಯುವಕರಿಗೆ ಆಸ್ಪತ್ರೆಯಲ್ಲಿ ಪಾವಗಡ ಚಿಕಿತ್ಸೆ

ಚಿರಂಜೀವಿ, ಅನಿಲ್, ಮಾರುತಿ, ಗುಣಶೇಖರ್ ಹಾಗೂ ಮಂಜುನಾಥ್ ಎಂಬುವವರ ಮೇಲೆ ಹಲ್ಲೆ ಮಾಡಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವಕರಿಗೆ ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಈ ಸಂಬಂಧ ವೈ.ಎನ್.ಹೊಸಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ವರ್ತನೆಗೆ ಗ್ರಾಮಸ್ಥರು ಹಾಗೂ ಯುವಕರ ಕುಟುಂಬದವರು ಆಕ್ರೋಶ ಹೊರಹಾಕಿದ್ದಾರೆ.

Exit mobile version