Site icon PowerTV

105 ಕೆ.ಜಿ ಚೀಲ ಹೊತ್ತು 575 ಮೆಟ್ಟಿಲು ಏರಿದ ಹನುಮ ಭಕ್ತ

ಬೆಂಗಳೂರು : ಹನುಮನ ಭಕ್ತನೊಬ್ಬ105 ಕೆ.ಜಿ ತೂಕದ‌ ಜೋಳದ ಚೀಲ‌ ಹೊತ್ತು ಇತಿಹಾಸ ಪ್ರಸಿದ್ಧ ಅಂಜನಾದ್ರಿ ಬೆಟ್ಟವನ್ನು ಏರಿದ್ದಾನೆ.

ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಹನುಮಂತಪ್ಪ ಅವರೇ 105 ಕೆ.ಜಿ ತೂಕದ‌ ಚೀಲ‌ ಹೊತ್ತು ಬೆಟ್ಟ ಏರಿದ ಹನುಮನ ಭಕ್ತ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಆಂಜನೇಯನ ಜನ್ಮಸ್ಥಳವೆಂದು ನಂಬಲಾಗಿದೆ. ಈ ಬೆಟ್ಟದಲ್ಲಿ ಆಂಜನೇಯನ ಗುಡಿಯಿದ್ದು, ಹಲವಾರು ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಹಲವು ಹರಕೆಗಳನ್ನು ಇಲ್ಲಿ ಸಲ್ಲಿಸಲಾಗುತ್ತದೆ. ಇಲ್ಲೋರ್ವ ಭಕ್ತ 105 ಕೆ.ಜಿ. ತೂಕದ‌ ಜೋಳದ ಚೀಲ‌ ಹೊತ್ತು ಅಂಜನಾದ್ರಿ ಬೆಟ್ಟ ಏರಿದ್ದಾನೆ.

575 ಮೆಟ್ಟಿಲು ಹತ್ತಿ ಸಾಹಸ

ಹನುಮನ ಪರಮಭಕ್ತನಾಗಿರುವ ಹನುಮಂತಪ್ಪ 105 ಕೆ.ಜಿ ಚೀಲ ಹೊತ್ತು 575 ಮೆಟ್ಟಿಲು ಹತ್ತಿ ಸಾಹಸ ಮೆರೆದಿದ್ದಾನೆ. ಬೆಟ್ಟ ಏರಿದ ಹನುಮಂತಪ್ಪನ ಸಾಹಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂಜಾನಾದ್ರಿ ಬೆಟ್ಟವನ್ನು ಹತ್ತಿದ ಹನುಮಂತಪ್ಪ ದೇವಸ್ಥಾನಕ್ಕೆ ಜೋಳವನ್ನು ಕಾಣಿಕೆಯಾಗಿ ನೀಡಿದ್ದಾರೆ.

ಇನ್ನೂ, ಕಳೆದ ನಾಲ್ಕು ದಿನಗಳ ಹಿಂದೆ ಬಾಗಲಕೋಟೆ ಮೂಲದ ವ್ಯಕ್ತಿಯೋರ್ವ 110 ಕೆ.ಜಿ ತೂಕದ ಜೋಳದ ಚೀಲ ಹೊತ್ತು ಬೆಟ್ಟ ಏರಿದ್ದರು.

Exit mobile version