Site icon PowerTV

ಪ್ಯಾನ್ಸ್ ಗೆ ‘ಏಪ್ರಿಲ್ ಫೂಲ್’ ಮಾಡಿದ ಉರ್ಫಿ ಜಾವೇದ್

ಬೆಂಗಳೂರು : ಸದಾ ತುಂಡುಡುಗೆ ಹಾಗೂ ಚಿತ್ರ ವಿಚಿತ್ರ ಇಂದಲೇ ಸುದ್ದಿಯಾಗುವ ನಟಿ ಉರ್ಫಿ ಜಾವೇದ್, ನಿನ್ನೆಯಷ್ಟೇ ಶಾಕಿಂಗ್ ಹೇಳಿಕೆ ನೀಡಿದ್ದರು. ಇದೀಗ, ಉಲ್ಟಾ ಹೊಡೆದಿದ್ದು, ಅಭಿಮಾನಿಗಳನ್ನು ಏಪ್ರಿಲ್ ಫೂಲ್ ಮಾಡಿದ್ದಾರೆ.

ಹೌದು, ನನ್ನ ಬಟ್ಟೆ ಕಾರಣದಿಂದಾಗಿ ನಿಮಗೆಲ್ಲ ನೋವಾಗಿದ್ದರೆ ಕ್ಷಮಿಸಿ. ಇನ್ಮುಂದೆ ಆ ರೀತಿಯ ಬಟ್ಟೆಗಳನ್ನು ಹಾಕುವುದಿಲ್ಲ. ನೀವು ಬದಲಾದ ಉರ್ಫಿ ನೋಡುತ್ತೀರಿ ಎಂದು ನಟಿ ಉರ್ಫಿ ಜಾವೇದ್ ತಿಳಿಸಿದ್ದರು.

ನಟಿ ಉರ್ಫಿ ಜಾವೇದ್ ಮಾತಿಗೆ ಕೆಲವರು, ಆಕೆ ಏಪ್ರಿಲ್ ಫೂಲ್ ಮಾಡ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಈಗದು ನಿಜವಾಗಿದ್ದು, ‘ನಾನು ನಿಮಗೆ ಏಪ್ರಿಲ್ ಫೂಲ್ ಮಾಡಿದೆ. ನಾನು ಬದಲಾಗಲ್ಲ’ ಎಂದು ಖುದ್ದು ನಟಿ ನಟಿ ಉರ್ಫಿ ಜಾವೇದ್ ಹೇಳಿದ್ದಾರೆ.

ಬಟ್ಟೆ ಹಾಕಿದ್ರೆ ಅಲರ್ಜಿ ಎಂದಿದ್ದ ನಟಿ

ಬಟ್ಟೆ ಹಾಕಿದ್ರೆ ಅಲರ್ಜಿ ಎಂದು ನಟಿ ಉರ್ಫಿ ಜಾವೇದ್ ಹೇಳಿದ್ದರು. ಮೈ ತುಂಬಾ ಬಟ್ಟೆ ಹಾಕುವುದರಿಂದ ತನಗೆ ಅಲರ್ಜಿಯಾಗುತ್ತದೆ. ಹೀಗಾಗಿ, ಅರೆಬರೆ ಬಟ್ಟೆ ಹಾಕುತ್ತೇನೆ ಎಂದು ಹೇಳಿದ್ದರು. ಬದಲಾದ ನಟಿ ಉರ್ಫಿ ಜಾವೇದ್ ಹೇಗೆ ಕಾಣಿಸುತ್ತಾರೆ ಎಂದು ನೋಡಲು ಪ್ಯಾನ್ಸ್ ಕಾತರರಾಗಿದ್ದರು.

ಎಲ್ಲರಿಗೂ SHOCK

ನಟಿ ಉರ್ಫಿ ಜಾವೇದ್ ನಿನ್ನೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದರು. ಇಷ್ಟು ದಿನ ತಾನು ಧರಿಸಿದ್ದ ಬಟ್ಟೆಗಾಗಿ ಜನರಲ್ಲಿ ಕ್ಷಮೆ ಕೇಳಿದ್ದಾರೆ. ಇನ್ನು ಅಂತಹ (ಚಿತ್ರ ವಿಚಿತ್ರ ಬಟ್ಟೆ)ಬಟ್ಟೆ ಧರಿಸುವುದಿಲ್ಲ ಎಂದು ಹೇಳಿದ್ದಾರೆ.

ನಾನು ಧರಿಸುವ ಬಟ್ಟೆಯಿಂದ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಇಂದಿನಿಂದ ನೀವು ಬದಲಾದ ಉರ್ಫಿಯನ್ನು ನೋಡುತ್ತೀರಿ. ಬದಲಾದ ಬಟ್ಟೆಯಲ್ಲಿ. ಕ್ಷಮೆಯಿರಲಿ. ಎಂದು ಉರ್ಫಿ ಜಾವೇದ್ ಟ್ವಿಟ್‌ನಲ್ಲಿ ಬರೆದುಕೊಂಡಿದ್ದಾರೆ.

Exit mobile version