Site icon PowerTV

ಕುಮಾರಣ್ಣನಿಗೆ ‘ಕಿಸ್’ ಕೊಟ್ಟ ಮಹಿಳಾ ಕಾರ್ಯಕರ್ತೆ

ಬೆಂಗಳೂರು : ಜೆಡಿಎಸ್ ನ ಮಹಿಳಾ ಕಾರ್ಯಕರ್ತೆಯೊಬ್ಬರು ಪಂಚರತ್ನ ಯಾತ್ರೆಯ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮುತ್ತುಕೊಟ್ಟಿದ್ದಾರೆ.

ಹೌದು, ರಾಜ್ಯಾದ್ಯಂತ ಸಂಚಾರ ನಡೆಸಿರುವ ಪಂಚರತ್ನ ಯಾತ್ರೆ ಮೈಸೂರಿನಲ್ಲಿ ಸಮಾರೋಪ ಸಮಾರಂಭದೊಂದಿಗೆ ಯಶಸ್ವಿಯಾಗಿದೆ. ಇದೀಗ ಬೆಂಗಳೂರು ವ್ಯಾಪ್ತಿಯಲ್ಲಿ ಪಂಚರತ್ನ ಯಾತ್ರೆ ಸಾಗುತ್ತಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಯಾತ್ರೆಯ ವೇಳೆ ಈ ಪ್ರಸಂಗ ನಡೆದಿದೆ.

ಪಂಚರತ್ನ ಯಾತ್ರೆಯ ವಾಹನದ ಮೇಲೆ ಕುಮಾರಸ್ವಾಮಿ ಅವರು ಮತ ಪ್ರಚಾರ ನಡೆಸುತ್ತಿದ್ದರು. ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಮಹಿಳಾ ಕಾರ್ಯಕರ್ತೆ ಕುಮಾರಸ್ವಾಮಿ ಹಿಂದೆ ನಿಂತಿದ್ದರು. ಇನ್ನೇನು, ಭಾಷಣ ಮುಗಿಸಿ ಹಿಂದಕ್ಕೆ ತಿರುಗುತ್ತಿದ್ದ ಕುಮಾರಸ್ವಾಮಿಗೆ ಶಾಕ್ ಕಾದಿತ್ತು. ದಿಢೀರನೆ ಕುಮಾರಸ್ವಾಮಿ ಹತ್ತಿರಕ್ಕೆ ಬಂದ ಮಹಿಳಾ ಕಾರ್ಯಕರ್ತೆ ಮುತ್ತುಕೊಟ್ಟಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

ರಾಜಕೀಯ ಬದುಕಿನ ಸ್ವರ್ಣ ಮೈಲುಗಲ್ಲು

ಪಂಚರತ್ನ ಯಾತ್ರೆ ನನ್ನ ರಾಜಕೀಯ ಬದುಕಿನ ಒಂದು ಸ್ವರ್ಣ ಮೈಲುಗಲ್ಲು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಣ್ಣಿಸಿದ್ದಾರೆ. ದಾಖಲೆ ಬರೆದಿರುವ ಪಂಚರತ್ನ ರಥಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಇದು ನನ್ನ ಜೀವನದಲ್ಲಿ ಅಚ್ಚಳಿಯದೇ ಉಳಿದುಹೋಗುವ ಆವಿಸ್ಮರಣೀಯ ಮಹಾಯಾತ್ರೆ. ಮೈಸೂರಿನಲ್ಲಿ ನಡೆದ ಸಮಾರೋಪ ಸಮಾವೇಶವಂತೂ ನನ್ನ ರಾಜಕೀಯ ಬದುಕಿನ ಒಂದು ಸ್ವರ್ಣ ಮೈಲುಗಲ್ಲು ಎಂದು ಹೇಳಿದ್ದಾರೆ.

Exit mobile version