Site icon PowerTV

ಡಾಲಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ನಿರ್ಮಾಪಕ : ಅಬ್ಬಾ ಈ ಕಾರಿನ ಬೆಲೆ ಎಷ್ಟು ಗೊತ್ತಾ?

ಬೆಂಗಳೂರು : ನಟ ಡಾಲಿ ಧನಂಜಯ್ ಅವರಿಗೆ ಕೆ.ಆರ್.ಜಿ ಸ್ಟುಡಿಯೋ (ಹೊಯ್ಸಳ) ನಿರ್ಮಾಪಕ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್ ಅವರು ದುಬಾರಿ ಕಾರೊಂದನ್ನು ಗಿಫ್ ನೀಡಿದ್ದಾರೆ.  

ಹೌದು, ನಿನ್ನೆಯಷ್ಟೇ ಡಾಲಿ ಧನಂಜಯ್​ ಅವರು ಗುರುದೇವ್ ಎಂಬ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹೊಯ್ಸಳ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಫೀವರ್ ಇದ್ದರೂ, ಡಾಲಿ ನಟನೆಯ 25ನೇ ಚಿತ್ರಕ್ಕೆ ಬಹುದೊಡ್ಡ ಓಪನಿಂಗ್ ಸಿಕ್ಕಿದೆ.

ಹೊಯ್ಸಳ ಚಿತ್ರದ ಗೆಲುವಿನ ಖುಷಿಯಲ್ಲಿರುವ ಡಾಲಿ ಧನಂಜಯ್ ಮನೆಗೆ ಇದೀಗ ಹೊಸ ಅತಿಥಿಯ ಆಗಮನವಾಗಿದೆ. ಈ ಬಗ್ಗೆ ಸ್ವತಃ ನಟ ಧನಂಜಯ ಅವರೇ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ನಿರ್ಮಾಪಕರ ಮತ್ತು ಅಭಿಮಾನಿಗಳ ಕೊಡುಗೆ

‘ನನ್ನ ಸಿನಿ ಜರ್ನಿಯ 25ನೇ ಚಿತ್ರ ಹಾಗೂ ಆತ್ಮೀಯ ವ್ಯಕ್ತಿಗಳಿಂದ ನನಗೆ ವಿಶೇಷ ಉಡುಗೊರೆ ಸಿಕ್ಕಿದೆ. ಇದಕ್ಕೆ ನಾನು ಆಭಾರಿ. ನಾನು ಎಂದಿಗೂ ನಿಮ್ಮನ್ನು ಪ್ರೀತಿಸುತ್ತೇನೆ. ಮತ್ತೆ ನಾವು ಒಟ್ಟಿಗೆ ಹೆಚ್ಚು ಹೆಚ್ಚು ಸಿನಿಮಾ ಕೆಲಸಗಳಲ್ಲಿ ಮುಂದುವರಿಯೋಣ. ಇಂಥ ಒಳ್ಳೆಯ ನೆನಪುಗಳಿಗೆ ಧನ್ಯವಾದಗಳು. ಇದು ನನ್ನ ನಿರ್ಮಾಪಕರ ಮತ್ತು ಅಭಿಮಾನಿಗಳ ಕೊಡುಗೆ’ ಎಂದು ನಟ ಡಾಲಿ ಧನಂಜಯ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

1 ಕೋಟಿ ಮೌಲ್ಯದ ಕಾರು

ನಟ ಧನಂಜಯ್​ ಅವರಿಗೆ ಟೊಯೊಟೋ ವೆಲ್​ಫೈರ್​ ಕಾರನ್ನು ಗಿಫ್ಟ್ ಆಗಿ ನೀಡಲಾಗಿದೆ. ಇದರ ಎಕ್ಸ್​ ಶೋ ರೂಂ ಬೆಲೆ ಬರೋಬ್ಬರಿ 96 ಲಕ್ಷ ರೂ. ಇದೆ. ಈ ಕಾರು ರಸ್ತೆಗೆ ಇಳಿಯುವಷ್ಟರಲ್ಲಿ ಒಂದು ಕೋಟಿ ವೆಚ್ಚವಾಗಲಿದೆ. ಧನಂಜಯ್ ಅವರು ಯೋಗಿ ಹಾಗೂ ಕಾರ್ತಿಕ್ ಅವರ ಜೊತೆ ಕಾರಿನ ಮುಂದೆ ನಿಂತು ಫೋಟೋಗೆ ಫೋಸ್ ಕೊಟ್ಟಿದ್ದಾರೆ.

Exit mobile version